Important
Trending

ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಪಲ್ಟಿಯಾದ ಕಾರು: ಮಹಿಳೆ ಸ್ಥಳದಲ್ಲೇ ಸಾವು

ಹೊಂಡ ತಪ್ಪಿಸಲು ಹೋದ ವೇಳೆ ನಡೆಯಿತು ದುರ್ಘಟನೆ

ಮುಂಡಗೋಡ: ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ಮಹಿಳೆ ಮೃತಪಟ್ಟ ಘಟನೆ ಇಲ್ಲಿನ ಎಪಿಎಮ್ ಸಿ ಹತ್ತಿರ ನಡೆದಿದೆ. ಹೌದು, ಕಾರಿನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಹೊಂಡ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ರೂಪಾಲಿ ಗುದಲಿ (42) ಅಪಘಾತದಲ್ಲಿ ಮೃತಪಟ್ಟ ಮಹಿಳೆ ಎಂದು ತಿಳಿದುಬಂದಿದೆ.

ಉತ್ತರಕನ್ನಡದ ಈ ಒಂಭತ್ತು ಅದ್ಭುತಗಳಿಗೆ ವೋಟ್ ಮಾಡಿ: ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡುವ ಸುವರ್ಣಾವಕಾಶ: ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೀಗೆ ಮಾಡಿ

ಕಾರಿನಲ್ಲಿದ್ದವರು ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವರಾಗಿದ್ದು ಕುಟುಂಬದ ಏಳು ಜನ ಸದಸ್ಯರು ಕೊಲ್ಲಾಪುರದಿಂದ ಪದ್ಮಾವತಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಕಾರಿನಲ್ಲಿದ್ದ ಕುಟುಂಬದ ಉಳಿದ ಸದಸ್ಯರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಿಸ್ಮಯ ನ್ಯೂಸ್, ಕಾರವರ

Related Articles

Back to top button