Important
Trending

ಜಿಂಕೆಯನ್ನು ಕೊಂದು ಕೋಡು , ಕೊಂಬು, ಮಾಂಸ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಓರ್ವ ಪರಾರಿ: ಬನವಾಸಿ ಅರಣ್ಯ ಇಲಾಖೆಯ ಕಾರ್ಯಾಚರಣೆ

ಶಿರಸಿ: ಜಿಂಕೆ ಯೊಂದನ್ನು ಕೊಂದು ಮಾಡಿ ಅದರ ಕೋಡು ,ಕೊಂಬು ಹಾಗೂ ಮಾಂಸಗಳನ್ನು ಮಾರಾಟ ಮಾಡಲು ಸಂಚುಮಾಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಯನ್ನು ಆಧರಿಸಿ ಬನವಾಸಿ ಅರಣ್ಯ ಅಧಿಕಾರಿಗಳು ಧಾಳಿ ನಡೆಸಿ ಈರ್ವರು ಆರೋಪಿಗಳನ್ನು ಬಂಧಿಸಿದ್ದು ಪ್ರಕರಣ ಮತ್ತೋರ್ವ ಆರೋಪಿ ನಾಪತ್ತೆ ಯಾಗಿರುವ ಘಟನೆ ಬನವಾಸಿ ಹೋಬಳಿಯ ಕಾನಕೊಪ್ಪದಲ್ಲಿ ನಡೆದಿದೆ.

ಅಪ್ರಾಪ್ರೆಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ: ದೂರು ದಾಖಲು

ಮೂವರು ಆರೋಪಿಗಳು ಸೇರಿ ಸಂಚು?

ಪರಮೇಶ್ವರ ಮಾದೇವ ಮಡಿವಾಳ ಕಾನಕೊಪ್ಪ ಹಾಗೂ ಶಿವಪ್ಪ ಬಸ್ಯಾ ಗೌಡ ಕಾನಕೊಪ್ಪ ಎಂಬುವವರನ್ನು ಬನವಾಸಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದು ,ಇನ್ನೋರ್ವ ಆರೋಪಿ ಶಿವರಾಂ ತಿಮ್ಮಾ ನಾಯ್ಕ ಕೆಳಗಿನ ಬ್ಯಾಗದ್ದೆ ಎಂಬಾತ ತಲೆಮರೆಸಿಕೊಂಡಿದ್ದಾನೆ. ಈ ಮೂವರು ಆರೋಪಿಗಳು ಸೇರಿ ಆಗಸ್ಟ್ 17ರ ಬೆಳಗಿನ ಜಾವ ಜಿಂಕೆಯನ್ನು ಬೇಟೆಯಾಡಿ ಅದರ ಕೊಂಬು ಹಾಗೂ ಮಾಂಸ ಸೇರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿ ಹಣಗಳಿಸಲು ಸಂಚು ರೂಪಿಸಿದ್ದರು.

ಈ ಕುರಿತು ಖಚಿತ ಮಾಹಿತಿ ಯನ್ನು ಆಧರಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಅಲ್ಲಿಗೂರ್ ಇವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್ , ಸಿಬ್ಬಂದಿಗಳಾದ ಮಹೇಶ್ ಅಜ್ಜೇರ್ , ರಮೇಶ್ ಎಚ್ ಸಿ , ಮಧುಕೇಶ್ವರ ನಾಯ್ಕ ಪಾಲ್ಗೊಂಡಿದ್ದು ಆರೋಪಿಗಳಿಂದ ಜಿಂಕೆ ಮಾಂಸ ಹಾಗೂ ಕೃತ್ಯಕ್ಕೆ ಬೆಳೆಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button