ಅಪ್ರಾಪ್ತೆಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ: ದೂರು ದಾಖಲು

ಅಪ್ರಾಪ್ತೆ ದಾಖಲಿಸಿದ ದೂರಿನಲ್ಲಿ ಏನಿದೆ ನೋಡಿ?

ಹೊನ್ನಾವರ: ಅಪ್ರಾಪ್ತ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಆರೋಪದ ಕುರಿತು ಯುವಕನ ಮೇಲೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಆರೋಪಿ ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ಕಳೆದ ನಾಲ್ಕು ತಿಂಗಳಿಂದ ಮನೆಯಲ್ಲೇ ಇರಿಸಿಕೊಂಡು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂಬ ಆರೋಪ ಕೇಳಿಬಂದಿದೆ.

ಉತ್ತರಕನ್ನಡದ ಈ ಒಂಭತ್ತು ಅದ್ಭುತಗಳಿಗೆ ವೋಟ್ ಮಾಡಿ: ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡುವ ಸುವರ್ಣಾವಕಾಶ: ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೀಗೆ ಮಾಡಿ

ಅಪ್ರಾಪ್ತ ಯುವತಿ ದಾಖಲಿಸಿದ ದೂರಿನಲ್ಲಿ ಏನಿದೆ ನೋಡಿ?

ಹೌದು, ಗೇರುಸೊಪ್ಪಾ ದೇವಿಗದ್ದೆ ನಿವಾಸಿ 21 ವರ್ಷದ ಯುವಕನ ಮೇಲೆ ಅಪ್ರಾಪ್ತ ಯುವತಿಯೇ ದೂರು ದಾಖಲಿಸಿದ್ಧಾಳೆ.

ತನ್ನನ್ನು ನಂಬಿಸಿ ಮೋಸ ಮಾಡಿದ್ದಾನೆ ಎಂದು ಅಪ್ರಾಪ್ತೆ ದೂರಿನಲ್ಲಿ ಆರೋಪಿಸಿದ್ದಾಳೆ. ದೂರಿನ ಮೇಲೆ ಹೊನ್ನಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version