Follow Us On

WhatsApp Group
Important
Trending

ಬಾಳೆಕೊನೆ ಸಾಗಿಸುವ ನೆಪದಲ್ಲಿ ಕಡವೆ ಕೊಂಬು ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಖಚಿತ ಮಾಹಿತಿ ಮೇರೆಗೆ ಕತಗಾಲ್ ಅರಣ್ಯವ್ಯಾಪ್ತಿಯಲ್ಲಿ ದಾಳಿ

ಕುಮಟಾ: ಬಾಳೆಕೊನೆಗಳನ್ನು ಸಾಗಿಸುವ ನೆಪದಲ್ಲಿ ಕಡವೆ ಕೊಂಬುಗಳನ್ನು ಸಾಗಿಸುತ್ತಿದ್ದ ವೇಳೆ ಆರೋಪಿಗಳನ್ನು ಕತಗಾಲ್ ಅರಣ್ಯವ್ಯಾಪ್ತಿಯಲ್ಲಿ ಬಂಧಿಸಿದ ಘಟನೆ ನಡೆದಿದೆ. ಹೌದು, ಕತಗಾಲ ವಲಯ ವ್ಯಾಪ್ತಿಯಲ್ಲಿ ಅನಧೀಕೃತವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಕಡವೆ ಕೊಂಬುಗಳನ್ನು ಅರಣ್ಯ ಇಲಾಖೆಯವರು ಆರೋಪಿ ಸಮೇತ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಅಪ್ರಾಪ್ರೆಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ: ದೂರು ದಾಖಲು

ನಾಲ್ಕು ಕಡವೆ ಕೊಂಬು, ಜಂಗ್ಲಿ ಜಾತಿಯ ಕೊರೆದು ಪ್ಲೇನಿಂಗ್ ಮಾಡಿದ ನಗಗಳನ್ನು ತಡರಾತ್ರಿ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಈ ದಾಳಿ ನಡೆಸಿದ್ದು, ವಾಹನ ಸಮೇತ ಕಡವೆ ಕೊಂಬುಗನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ಚಾಲಕ ಶಿರಸಿಯ ಕಸ್ತೂರಿಬಾ ನಗರದ ನಿವಾಸಿ ಮಹಮದ್ ಅಸ್ಲಾಮ್ ಬಾಬಾ ಜಾನ್ ಕರ್ಕಿಮಕ್ಕಿ ಮತ್ತು ಶಿರಸಿ ಅಂಜು ಫರ್ನಿಚರ್ ಮಾಲೀಕ ಅಂಥೋನ್ ಬಿ ನರೋನಾ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button