Focus News
Trending

ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ: ಆತಂಕ‌ ನಿವಾರಿಸಿದ ಉರಗ ತಜ್ಞ

ಅಂಕೋಲಾ: ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಶಾಂತ ನಾಯ್ಕ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟ ಘಟನೆ ತಾಲೂಕಿನ ಕೊಡ್ಲಗದ್ದೆಯಲ್ಲಿ ನಡೆದಿದೆ.

ಕಾಳಿಂಗ ಸರ್ಪ ಅಂಗನವಾಡಿ ಕೊಠಡಿಯಲ್ಲಿದ್ದ ಬಾಕ್ಸ್ ಒಂದರಲ್ಲಿ ಸೇರಿಕೊಂಡಿರುವುದು ಕೇಂದ್ರದ ಕಾರ್ಯಕರ್ತೆಯರ ಗಮನಕ್ಕೆ ಬರುತ್ತಲೇ, ಸ್ಥಳೀಯ ಪ್ರಮುಖರ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ರಾಮನಗುಳಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ವಜ್ರಳ್ಳಿ ಉಪ ವಲಯ ಅರಣ್ಯಾಧಿಕಾರಿ ಮತ್ತು ಉರಗ ತಜ್ಞ ಪ್ರಶಾಂತ ನಾಯ್ಕ ಅವರ ಸಹಾಯದಿಂದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಡಿ.ಸಿ.ಎಫ್ ಡಾ.ಪ್ರಶಾಂತ ಕೆ.ಸಿ, ಎ.ಸಿ.ಎಫ್ ಮಂಜುನಾಥ ನಾವಿ ಅವರ ಮಾರ್ಗದರ್ಶನದಲ್ಲಿ ರಾಮನಗುಳಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಲ್ಲಪ್ಪನವರ್, ಉಪ ವಲಯ ಅರಣ್ಯಾಧಿಕಾರಿ ಹಜರತ್ ಅಲಿ, ಅರಣ್ಯ ರಕ್ಷಕ ಸೋಮನಾಥ ಕುಂಬಾರ, ಗ್ರಾಮಸ್ಥರಾದ ಆರ್. ಸಿ.ಹೆಗಡೆ, ಚಂದು ನಾಯ್ಕ, ನಾಗರಾಜ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರದಲ್ಲಿ ಕಾಳಿಂಗ ಸರ್ಪ ಬಂದಿರುವ ಸುದ್ದಿ ತಿಳಿದು ಹಲವರು ಆತಂಕಿತರಾಗಿದ್ದರು. ಅರಣ್ಯ ಇಲಾಖೆಯ ಯಶಸ್ವೀ ಕಾರ್ಯಚರಣೆಯಿಂದ , ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button