Follow Us On

WhatsApp Group
Important
Trending

ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಗಂಟೆಗಳ ಕಾಲ ವಾಹನದ ಒಳಗೆ ಸಿಲಿಕಿಕೊಂಡು ಒದ್ದಾಡಿದ ಚಾಲಕ

ಇಬ್ಬರಿಗೆ ಗಂಭೀರ ಗಾಯ: ಕ್ರೇನ್ ಸಹಾಯದಿಂದ‌ ರಕ್ಷಣೆ

ಕುಮಟಾ : ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಚಾಲಕ ಹಾಗೂ ನಿರ್ವಾಹಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮಾನೀರ್ ಸಮೀಪ ನಡೆದಿದೆ. ಬಾಗಲಕೋಟ ಜಿಲ್ಲೆಯ ನಿವಾಸಿ ಅಜಯ ರಾಥೋಡ ಹಾಗೂ ಕುಮಟಾ ತಾಲೂಕಿನ ಕಲಭಾಗ ನಿವಾಸಿ ಆನಂದು ಭಂಡಾರಿ ಗಾಯಗೊಂಡ ಚಾಲಕರು.

ಸಿಲೆಂಡರ್ ಸ್ಫೋಟ: ಅಂಗಡಿ ಛಿದ್ರ ಛಿದ್ರ: ಅಪಾರ ಹಾನಿ

ಗಂಭೀರವಾಗಿ ಗಾಯಗೊಂಡ ಇವರನ್ನು ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳ ಮುಂಬಾಗ ಸಂಪೂರ್ಣ ಜಖಂಗೊಂಡಿದೆ.

ವಾಹನದ ಒಳಗೆ ಸಿಲಿಕಿಕೊಂಡಿದ್ದವರನ್ನು ಸಾರ್ವಜನಿಕರ ಮತ್ತು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್ ಉಂಟಾಗಿತ್ತು.

ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಕುಮಟಾ CPI ತಿಮ್ಮಪ್ಪ ನಾಯ್ಕ ಮತ್ತು PSI ನವೀನ್ ನಾಯ್ಕ, ರವಿ ಗುಡ್ಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Back to top button