Big News
Trending

ಆನ್‌ಲೈನ್ ನಲ್ಲಿ ಕಾರ್ ಕವರ್ ಖರೀದಿಸಿದ ವ್ಯಕ್ತಿಗೆ ಏಳು ಲಕ್ಷ ರೂಪಾಯಿ ಮೋಸ: ಈ ರೀತಿಯ ಮೋಸದ ಬಗ್ಗೆ ಇರಲಿ ಎಚ್ಚರ

ಕಾರವಾರ: ಇತ್ತಿಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಹೆಚ್ಚುತ್ತಿದ್ದು, ಜನರು ಜಾಗೃತರಾಗಬೇಕಿದೆ. ಹೌದು, ಆನ್‌ಲೈನ್ ಆಪ್ ನಲ್ಲಿ ಕಾರ್ ಕವರನ್ನು ಖರೀದಿಸಿದ ವ್ಯಕ್ತಿಯೊಬ್ಬ ಬರೋಬ್ಬರಿ 7ಲಕ್ಷ ಹಣವನ್ನು ಕಳೆದುಕೊಂಡ ಘಟನೆ ಕಾರವಾರ ತಾಲೂಕಿನ ಗೊಟೆಗಾಳಿಯಿಂದ ಬೆಳಕಿಗೆ ಬಂದಿದೆ. ಕಾರವಾರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇಲ್ಲಿನ ನಿವೃತ್ತ ನೌಕರ ಅರವಿಂದ ಪರಮಹಂಸ ತಿವಾರಿ ಹಣ ಕಳೆದುಕೊಂಡ ವ್ಯಕ್ತಿ.

ಆನ್‌ಲೈನ್ ಆಪ್‌ನಲ್ಲಿ ಕಾರ್ ಕವರನ್ನು ಆರ್ಡರ್ ಮಾಡಲಾಗಿತ್ತು. ಅದು ಸಮಯಕ್ಕೆ ಸರಿಯಾಗಿ ಡಿಲೇವರಿಯಾಗಿದ್ದು, ಕಾರ್ ಕವರನ್ನು ತನ್ನ ಕಾರ್‌ಗೆ ಅಳವಡಿಸಲು ಹೋದಾಗ ಅದು ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಕಾರ್ ಕವರ್‌ನ್ನು ವಾಪಸ್ ಮಾಡಲು ನಿರ್ಧರಿಸಿದ್ದು, ಪಾರ್ಸಲ್ ಕವರ ಒಳಗಡೆ ಇದ್ದ ಕಾರ್‌ರವರ ಮೇಲೆ ನಮೂದಿದ್ದ ಕಂಪನಿಯ ಕಾಂಟೆಕ್ಟ್ ನಂಬರ್ ಗೆ ಕರೆ ಮಾಡಲಾಗಿದೆ.

ತನಗೆ ಡಿಲೇವರಿ ಆಗಿದ್ದ ಕಾರ್ ಕವರ್ ತನ್ನ ಕಾರಿಗೆ ಸರಿ ಹೊಂದುತ್ತಿಲ್ಲ . ಹೀಗಾಗಿ ಅದನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಅದಕ್ಕೆ ಅವರು ಐದು ರೂಪಾಯಿ ಟೋಕನ್ ಹಣ ಪಾವತಿಸಬೇಕಾಗುತ್ತದೆಂದು ಹೇಳಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕೇಳಿದ್ದಾರೆ. ಈ ವೇಳೆ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದು, ಬಳಿಕ ಒಂದು ದಿನ ಬಿಟ್ಟು ಖಾತೆ ಪರಿಶೀಲಿಸಿದಾಗ ಖಾತೆಯಿಂದ ಏಳು ಲಕ್ಷ ರೂಪಾಯಿ ಹಣ ಡ್ರಾ ಆಗಿದೆ.

ಇದರಿಂದ ವಿಚಲಿತರಾದ ಅರವಿಂದ ತಿವಾರಿ ಅವರು ಹಣವನ್ನು ವಂಚಿಸಿದ ಅಪರಿಚಿತ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರವಾರ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ನಲ್ಲಿ ಅನಾಮಿಕರಿಗೆ ಬ್ಯಾಂಕ್ ನೀಡುವಾಗ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button