Follow Us On

WhatsApp Group
Focus News
Trending

ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ಬಿಪ್ಲಸ್ ನ್ಯಾಕ್ ಮಾನ್ಯತೆ: ಆಧುನೀಕೃತ ಬೋಧನಾ ಕೊಠಡಿಯ ಪಾಠ-ಪ್ರವಚನವನ್ನು ವೀಕ್ಷಿಸಿ ಹರ್ಷ

ಕುಮಟಾ : ರಾಜ್ಯದ ಪ್ರತಿಷ್ಠಿತ ಮಹಾವಿದ್ಯಾಲಯವಾದ ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ನವೆಂಬರ್ 18 ಮತ್ತು 19 ರಂದು ನ್ಯಾಕ್ ಸಮೀತಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿತ್ತು. ಇದಕ್ಕೆ ಸಂಬoದಿಸಿದoತೆ ಅಂಕಗಳನ್ನು ನೀಡಿದ್ದು ಕಾಲೇಜು ಉನ್ನತ ಬಿಪ್ಲಸ್ ನ್ಯಾಕ್ ಶ್ರೇಣಿಯನ್ನು ಪಡೆದುಕೊಂಡಿದೆ.

ನ್ಯಾಕ್ ಸಮಿತಿಯವರು ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳು, ಪಾಲಕರು-ಪೂರ್ವವಿದ್ಯಾರ್ಥಿಗಳು ಕಾಲೇಜಿನ ಬೇರೆ-ಬೇರೆ ವಿಭಾಗ ಹಾಗೂ ಘಟಕಗಳ ಅಭಿವೃದ್ದಿಯನ್ನು ಪರಿವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉಪನ್ಯಸಕರೊಂದಿಗೆ ಸಂವಾದವನ್ನು ನಡೆಸಿ ಎಲ್ಲಾ ವಿಭಾಗಗಳ-ಘಟಕಗಳ ದಾಖಲೆಯನ್ನು ಪರಿಶೀಲಿಸಿ ಆಧುನೀಕೃತ ಬೋಧನಾ ಕೊಠಡಿಯ ಪಾಠ-ಪ್ರವಚನವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

ಕಾಲೇಜಿನ ವಿಶಾಲ ಹೊರ-ಒಳ ಆಟದ ಮೈದಾನ, ಗಾರ್ಡನ್, ಕ್ರೀಡಾ ಸೌಲಭ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳ ಗುಣಮಟ್ಟವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಸೋಲಾರ ಅಳವಡಿಕೆ, ಮಳೆಕೊಯ್ಲು, ಕಾಲೇಜಿನ ಸುತ್ತಲೂ ಬೆಳೆಸಿದ ಗಿಡಗಳ ಹಸರೀಕರಣ ಇತ್ಯಾದಿಗಳನ್ನು ಪರಿಶೀಲಿಸಿ ಹರ್ಷವ್ಯಕ್ತಪಡಿಸಿದರು. ಕಾಲೇಜಿನ ಗುಣಮಟ್ಟವನ್ನು ಉನ್ನತೀಕರಿಸಿದ ಪ್ರಾಚಾರ್ಯ ಡಾ. ಎಸ್. ವಿ. ಶೇಣ್ವಿಯವರ ಕಾರ್ಯವನ್ನು ಶ್ಲಾಘಿಸಿದರು.

ಗಣಕೀಕೃತ ಗ್ರಂಥಾಲಯ, ಇ-ಲೈಬ್ರರಿ, ವಿಪುಲ ಪುಸ್ತಕ ಭಂಡಾರ ಇತ್ಯಾದಿ ಸೌಲಭ್ಯಗಳನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ.. ಸಂತೋಷ ಶಾನಭಾಗ ಹಾಗೂ ನ್ಯಾಕ್ ಸಂಯೋಜಕ ಶ್ರೀ. ಶಿವಾನಂದ ಬುಳ್ಳಾ ಇವರ ಪ್ರಯತ್ನವನ್ನು ಮೆಚ್ಚಿ ಸಲಹೆ ನೀಡಿದರು.

ಕೆನರಾ ಕಾಲೇಜು ಸೊಸೈಟಿಯ ಅಧ್ಯಕ್ಷರಾದ ಸಿಎ ರಘು ಪಿಕಳೆ ನ್ಯಾಕ್ ಸಮಿತಿಯೊಂದಿಗೆ ಕಾಲೇಜಿನ ಅಭೀವೃದ್ದಿಯ ಕುರಿತು ಸುಧೀರ್ಘ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪುರುಷೋತ್ತಮ ಶ್ಯಾನಭಾಗ, ಕಾರ್ಯಧ್ಯಕ್ಷ ಡಿ. ಎಂ. ಕಾಮತ, ಕಾರ್ಯದರ್ಶಿ ಸುಧಾಕರ ನಾಯಕ ಇತರರು ಉಪಸ್ಥಿತರಿದ್ದರು. ನ್ಯಾಕ್ ಬಿಪ್ಲಸ್ ಗ್ರೇಡ ಪಡೆಯುವಲ್ಲಿ ಸಹಕರಿಸಿದ ಸರ್ವರಿಗೂ ಪ್ರಾಚಾರ್ಯರು ಕಾಲೇಜಿನ ಪರವಾಗಿ ಧನ್ಯವಾದ ತಿಳಿಸಿದರು.

Back to top button