Important
Trending

ಬೈಕ್ ಗೆ ಡಿಕ್ಕಿ ಹೊಡೆದ ಪಿಕಪ್: ಸ್ಥಳದಲ್ಲೇ ಯುವಕ ಸಾವು

ಸಿದ್ದಾಪುರ: ಪಿಕ್ ಅಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಹಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ತಾಲೂಕಿನ ಕಾಳೆನಳ್ಳಿ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.ಕಾಳೇನಳ್ಳಿ ಸಮೀಪದ ದೊಡ್ಡಜಡ್ಡಿಯ ಯುವಕ ಹರೀಶ ರಾಮಚಂದ್ರ ನಾಯ್ಕ 24 ವರ್ಷ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಅನುಮತಿಯಿಲ್ಲದೆ ಮನೆಯಲ್ಲೇ ಪಟಾಕಿ ತಯಾರಿ: ಮೂವರ ಬಂಧನ

ಸಿರ್ಸಿ ಸಿದ್ದಾಪುರ ಮುಖ್ಯರಸ್ತೆ ಯಲ್ಲಿ ಯುವಕನು ಸ್ಕೂಟಿಯಲ್ಲಿ ಶಿರಸಿ ಕಡೆಗೆ ಹೋಗುತ್ತಿರುವಾಗ ಸಿದ್ದಾಪುರ ಕಡೆಗೆ ಬರುತ್ತಿದ್ದ ಪಿಕಪ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ . ಸ್ಥಳಕ್ಕೆ ಸಿದ್ದಾಪುರ ಪಿ.ಎಸ್.ಐ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ‌ ಸಿದ್ದಾಪುರ

Back to top button