ಕಾರವಾರ: ಸ್ವರ್ಣವಲ್ಲಿ ಮಾಡುವ ಕಾರ್ಯದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇAದ್ರ ಸರಸ್ವತೀ ಸ್ವಾಮಿ ಹೇಳಿದರು. ಭಗವದ್ಗೀತಾ ಅಭಿಯಾನದ ಭಾಗವಾಗಿ ಇಲ್ಲಿನ ನಗರಸಭೆ ಪೌರ ಕಾರ್ಮಿಕರು ಹಾಗೂ ನೌಕರರಿಗೆ ಭಗವದ್ಗೀತೆ ಬೋಧಿಸಿ, ಆಶೀರ್ವಚನ ನೀಡಿದರು.
ಸರ್ಕಾರದ ಕೆಲಸ ಎಂದರೆ ದೇವರ ಕೆಲಸ. ದೇವರು ಮೆಚ್ಚುವ ಹಾಗೆ ಕೆಲಸ ಮಾಡಿದರೆ ಮೇಲಾಕಾರಿಗಳಿಂದಲೂ ಮೆಚ್ಚುಗೆ ತಾನಾಗಿಯೇ ಬರುತ್ತದೆ. ನಗರ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಕಾರ್ಯ ಅತಿ ಶ್ರೇಷ್ಠವಾದುದು ಎಂದರು. ಭಗವದ್ಗೀತೆಯಲ್ಲಿ ಜೀವನದ ಸಾರ ಅಡಕವಾಗಿದೆ. ಹಾಗಾಗಿ ಅದನ್ನು ಓದಿ ಅರ್ಥ ಗ್ರಹಿಸಿ ದಿನವೂ ಪಠಣ ಮಾಡಿದರೆ ನೆಮ್ಮದಿಯ ಜೀವನಕ್ಕೆ ಅದು ಸೋಪಾನವಾಗಲಿದೆ ಎಂದರು.
ವಿಸ್ಮಯ ನ್ಯೂಸ್, ಶಿರಸಿ