Important
Trending

ಮತ್ತೊಂದು ಅಡಕೆ ಕಳ್ಳತನ ಪ್ರಕರಣ: ಕಳ್ಳರ ಜಾಡು ಪತ್ತೆ ಹಚ್ಚಲು ಶ್ವಾನದಳ ಬಳಕೆ

ಅಂಕೋಲಾ: ತಾಲೂಕಿನ ಕೊಡ್ಲಗದ್ದೆಯ ಹಳೆತೋಟ ವ್ಯಾಪ್ತಿಯಲ್ಲಿ  ಅಡಿಕೆ ಕಳ್ಳತನ ಪ್ರಕರಣ ನಡೆದಿದ್ದು, ಕಳ್ಳರ ಜಾಡು  ಪತ್ತೆ ಹಚ್ಚಲು ಶ್ವಾನದಳವನ್ನು ಬಳಸಲಾಗಿದೆ.ತನ್ನ ತೋಟದಲ್ಲಿ ಕೊಯ್ದಿಟ್ಟಿದ್ದ ಅಡಿಕೆ ಕಳ್ಳತನವಾಗಿರುವ  ಕುರಿತು ತೋಟದ ಮಾಲಿಕ ರಾಮಚಂದ್ರ ವಿಶ್ವೇಶ್ವರ ಹೆಗಡೆ ಎನ್ನುವವರು ನೀಡಿದ ದೂರಿನ  ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರವಾರದ ಶ್ವಾನದಳವನ್ನು ಸಹ  ಕರೆಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ತೋಟದ ಹತ್ತಿರ ನೀರಿನ ತೊರೆಯೂ ಹರಿದು ಹೋಗಿರುವುದು, ಶ್ವಾನದಳದಿಂದ ಪತ್ತೆ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಗಿರಬಹುದೇ ಎಂಬ ಮಾತು ಸಹ ಸ್ಥಳೀಯರಿಂದ ಅಲ್ಲಲ್ಲಿ ಕೇಳಿ ಬಂದಂತಿದೆ. ಪ್ರಕರಣ ತನಿಖಾ ಹಂತದಲ್ಲಿರುವದರಿಂದ  ಪೊಲೀಸರು ಮತ್ತಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಹೆಚ್ಚಿನ ವಿವರ ನೀಡುತ್ತಿಲ್ಲ ಎನ್ನಲಾಗಿದೆ. 

ಸುಮಾರು 10 ಚೀಲ ಅಡಿಕೆ ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ. ಅಂಕೋಲಾ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ನೇತೃತ್ವದ ತಂಡದಲ್ಲಿ, ಪ್ರೊ . ಪಿ ಎ ಸೈ ಮುಶಾಹಿದ್ ಅಹಮದ್, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ,ಶ್ರೀಕಾಂತ ಕಟಬರ್, ಗುರುರಾಜ ಇತರರು  ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ   ಪ್ರಕರಣಕ್ಕೆ ಸಂಬಂಧಿಸಿದಂತೆ,ಮಾಹಿತಿ ಕಲೆ ಹಾಕಿದ್ದಾರೆ.                       

ಅಡಕೆಗೆ ಬಂಗಾರದ ಬೆಲೆ ಬಂದಿದ್ದು, ಹೆಚ್ಚುತ್ತಿರುವ ದರದಿಂದ ಕಳ್ಳರ ವಕ್ರದೃಷ್ಟಿ ಅಡಕೆ ಮೇಲೆ ಬಿದ್ದಂತಿದೆ. ಈ ಹಿಂದೆಯೂ ತಾಲೂಕಿನಲ್ಲಿ ಅನೇಕ ಸಣ್ಣಪುಟ್ಟ ಅಡಿಕೆ ಕಳ್ಳತನ ಪ್ರಕರಣ ಬೇಧಿಸುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ. ಆಂದ್ಲೆ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಸಂಗ್ರಹಿಸಿಟ್ಟ ಅಡಿಕೆ ಚೀಲಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಹಿತಿನಿಸು ವ್ಯಾಪಾರಿ ಹಾಗೂ ಕಟ್ಟಡದ ಕೂಲಿಕಾರ್ಮಿಕನನ್ನು ಬಂಧಿಸಿ, ಅವರು ಕದ್ದ ಅಡಿಕೆ ಚೀಲಗಳು , ಹಾಗೂ ಕಳ್ಳತನಕ್ಕೆ ಬಳಸಿದ ಕಾರ ಜಪ್ತಿಪಡಿಸಿಕೊಂಡಿದ್ದರು.

ಅದಾದ ಬೆನ್ನಿಗೇ ಬೇರೆ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂಕಸಾಳ ವ್ಯಾಪ್ತಿಯಲ್ಲಿ ಅಡಿಕೆಗೊನೆಗಳ್ಳರ ಬಂಧನ ಕಾರ್ಯಾಚರಣೆ ನಡೆಸಿ, ಕದ್ದ ಮಾಲು ವಶಪಡಿಸಿಕೊಂಡಿದ್ದರು. ಈಗ ಕೊಡ್ಲ ಗದ್ದೆಯಲ್ಲಿ ಹೊಸ ಕಳ್ಳತನ ಪ್ರಕರಣ ದಾಖಲಾಗಿದ್ದು, ತೋಟದ ಕೂಲಿ ಕಾರ್ಮಿಕರು ಮತ್ತಿತರ ಸಂಶಯಿತರ ವಿಚಾರಣೆ ನಡೆಸಿ, ಕಳ್ಳತನದ ಜಾಡು ಬೇಧಿಸಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.         

ವಿಸ್ಮಯ ನ್ಯೂಸ್  ವಿಲಾಸ ನಾಯಕ ಅಂಕೋಲಾ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Back to top button