Follow Us On

WhatsApp Group
Focus News
Trending

ಹಿರೇಗುತ್ತಿ ಹೈಸ್ಕೂಲಿನಲ್ಲಿ NTSE ತರಬೇತಿ ಕಾರ್ಯಾಗಾರ


ಹಿರೇಗುತ್ತಿ: “ಹೊಸ ಶತಮಾನ ಹೊಸ ಹೊಸ ತಂತ್ರಜ್ಞಾನ, ಹೊಸ ಶಿಕ್ಷಣ, ಹೊಸ ಹೊಸ ಪರಿಷ್ಕರಣ ಪರಿವರ್ತನೆ ಹೊಸ್ತಿಲಲ್ಲಿದ್ದೇವೆ. ಶಿಕ್ಷಣದ ಹೊಸ ಸಂವತ್ಸರ ಆರಂಭಗೊoಡಿದೆ. ವಿದ್ಯೆಯಲ್ಲೂ ಈಗ ವಿನೂತನ ವಿದ್ಯಮಾನಗಳು, ವಿನೂತನ ವಿದ್ಯುನ್ಮಾನಗಳು ಆರಂಭಗೊoಡಿದೆ. NTSE ಕ್ರಿ.ಶ 1963ರಂದು ದೇಶದಲ್ಲಿ ಆರಂಭಗೊoಡಿದೆ, ಪರೀಕ್ಷೆಯಲ್ಲಿ ಪಾಲ್ಗೊಂಡು ಶಾಲೆಗೆ ಪಾಲಕರಿಗೆ ಊರಿಗೆ ಕೀರ್ತಿ ತನ್ನಿ” ಎಂದು ಹಿರೇಗುತ್ತಿ ಪದವಿಪೂರ್ವ ಕಾಲೇಜ್ ಉಪನ್ಯಾಸಕಿ ನೇತ್ರಾವತಿ ನಾಯಕ ನುಡಿದರು. ಅವರು ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ NTSE ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

“ರಾಷ್ಟಿçÃಯ ಪ್ರತಿಭಾನ್ವೇಷಣೆ ಪರೀಕ್ಷೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನ್ವೇಷಣೆ ಮಾಡಲು ಸರ್ಕಾರ ಹಮ್ಮಿಕೊಂಡ ವಿನೂತನ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವ ಘನ ಉದ್ದೇಶ ಹೊಂದಿದೆ. ತಾಂತ್ರಿಕ ಶಿಕ್ಷಣ ದೇಶದ ಪ್ರಗತಿಯ ಅವಿಭಾಜ್ಯ ಅಂಗ” ಎಂದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ “ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ” ಎಂಬ ಡಿ.ವಿ.ಜಿ ಯವರ ಮಾತು ಅನುಸರಣೀಯ ಶಿಕ್ಷಣ ಮೌಲ್ಯಧಾರಿತವಾಗಬೇಕೆಂಬುದು ಎಷ್ಟು ಮುಖ್ಯವೋ ಅದು ಪ್ರಗತಿದಾಯಕವಾಗಬೇಕೆಂಬುದು ಅಷ್ಟೇ ಪ್ರಮುಖ. NTSE ಪರೀಕ್ಷೆಗೆ ಹಾಜರಾಗಿ ನಿಮ್ಮ ಪ್ರತಿಭೆಯನ್ನು ತೋರ್ಪಡಿಸಿ” ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಜ್ಞಾನ ಶಿಕ್ಷಕ ಮಹಾದೇವ ಗೌಡರವರು “ಅನುಭವದ ಕಲಿಕೆಯು ಮಗುವಿನ ಮನೋವಿಕಾಸಕ್ಕೆ ಕಾರಣವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನ್ವೇಷಣೆ ಮಾಡಲು NTSE ಪರೀಕ್ಷೆ ಅತ್ಯಂತ ಪ್ರಮುಖ” ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಬಾಲಚಂದ್ರ ಹೆಗಡೆಕರ್, ನಾಗರಾಜ ನಾಯಕ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ದಿವಗಿ, ಬಿ.ಎಡ್ ಪ್ರಶಿಕ್ಷಣಾರ್ಥಿ ಸ್ವಾತಿ ಡಿ. ಹರಿಕಂತ್ರ ಉಪಸ್ಥಿತರಿದ್ದರು. ಕಾರ್ಯಕ್ರಮವು ರಕ್ಷಿತಾ ಅಂಬಿಗ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮ ಸ್ವಾಗತಿಸಿ ನಿರ್ವಹಣೆ ಮಾಡಿದರು. ವಿದ್ಯಾರ್ಥಿನಿ ಪ್ರತಿಕಾ ಖಾರ್ವಿ ವಂದಿಸಿದರು.

Back to top button