ಸಿದ್ದಾಪುರ: ತಾಲ್ಲೂಕಿನ ಶಿರಳಗಿ ಗ್ರಾಮದಲ್ಲಿ ಸುರಿದ ಅಕಾಲಿಕ ಮಳೆಗೆ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ಕಟಾವು ಮಾಡಿದ ಬತ್ತ, ಬತ್ತದ ಹುಲ್ಲು ನೆನೆದು ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರು ಕಂಗಲಾಗಿದ್ದಾರೆ. ಈ ವರ್ಷ ಪೂರ್ತಿ ಇದೆ ರೀತಿ ಮಳೆ ಸುರಿದರೆ ರೈತರ ಮುಂದಿನ ಗತಿ ಏನು ಎಂಬುದು ರೈತರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆ ಯಾಗಿದೆ.
ಮಳೆ ಹಾನಿಗೆ ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಾಶವನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮಾಧ್ಯಮದ ಮೂಲಕ ಶಿರಳಗಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ ಶಿರಾಳಗಿಯ ದ್ಯಾವ ಕೆಂಪ ನಾಯ್ಕ ರೇವಣ್ಣ ನಾಯ್ಕ ಚಂದ್ರ ಬರ್ಮಾ ನಾಯ್ಕ ಬಂಗಾರೆಶ್ವರ ಶಿವ ನಾಯ್ಕ ಪ್ರದೀಪ್ ನಾರಾಯಣ ನಾಯ್ಕ ದೇವಿಕಿ ಅಣ್ಣಪ್ಪ ನಾಯ್ಕ ರಾಮಚಂದ್ರ ಕನ್ನ ನಾಯ್ಕ ಗೋವಿಂದ ಕೆಂಪ ನಾಯ್ಕ ಕಾಳಿ ತಿಮ್ಮ ನಾಯ್ಕ ಮುಂತಾದವರ ಬೆಳೆ ಗೆ ಹಾನಿಯಾಗಿದ್ದು. ಅಧಿಕಾರಿಗಳು ಕೂಡಲೇ ಬೆಳೆ ಹಾನಿ ವರದಿಯನ್ನು ಸರಕಾರ ಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ