ಸಿದ್ದಾಪುರ: ಪಶುಸಂಗೋಪನಾ ಇಲಾಖೆಯಲ್ಲಿ ಪಶುಅಧಿಕಾರಿಯಾಗಿ ಇದೆ ಅಕ್ಟೋಬರ್ 31 ರಂದು ನಿವೃತ್ತಿ ಹೊಂದಿದ್ದ ನರೇಂದ್ರ ಸುಬ್ರಾಯ ಹೆಗಡೆ ತೇರಗಡ್ಡೆಮನೆ ತ್ಯಾಗಲಿಯವರು ಇತೀಚೆಗೆ ತೀವ್ರ ಸ್ವರೂಪದ ಹೃದಯಾಘಾತದಿಂದ ನಿಧನ ಹೊಂದಿದರು .
ಹೊಸಕೋಟೆ ತಾಲೂಕಿನ ಸುಲಿಬೆಲೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ್ದ ಅವರು ನಂತರ ಹೊನ್ನಾವರ ತಾಲೂಕಿನ ಮೂಡ್ಕಣಿ , ಹಾಗು ಸಿದ್ದಾಪುರದಲ್ಲೂ ಸೇವೆಸಲ್ಲಿಸಿದ್ದರು. ಸರಳ ,ಸ್ನೇಹ ಸ್ವಭಾವದ ಇವರು ಸೇವೆ ಸಲ್ಲಿಸಿದ ಎಲ್ಲಕಡೆಯೂ ಜನರ ಪ್ರಿತಿ ವಿಶ್ವಾಸ ಗಳಿಸಿದ್ದರು.
ನಂತರ ಹಳಿಯಾಳದಲ್ಲಿ ಸೇವೆಸಲ್ಲಿಸಿ ಪಶು ಅಧಿಕಾರಿಯಾಗಿ ಬಡ್ತಿ ಹೊಂದಿ , ಇದೇ ಅಕ್ಟೋಬರ್ ೩೧ ರಂದು ನಿವೃತ್ತಿ ಹೊಂದಿದ್ದರು .ಮೃತರು ತಂದೆ , ಹೆಂಡತಿ , ಮಗಳು , ಮಗ ಹಾಗೂ ಅಪಾರ ಬಂಧು, ಬಳಗ , ಸ್ನೇಹಿತರನ್ನು ಅಗಲಿದ್ದಾರೆ .
ವಿಸ್ಮಯ ನ್ಯೂಸ್ ಸಿದ್ದಾಪುರ