ಕಾರವಾರ: ಬಿಳಿ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡನೆಯ ಮುಖ, 23 ವಯಸ್ಸಿನ, ಪ್ರೀತಿ ನಾಯಕ ಎನ್ನುವ ಮಹಿಳೆ ತನ್ನ ಒಂದು ವರ್ಷದ ಮಗನೊಂದಿಗೆ ಕಾಣೆಯಾಗಿದ್ದಾಳೆ. ಮನೆಯಲ್ಲಿ ಯಾರಿಗೂ ಹೇಳದೆ, ಕೇಳದೆ ಎಲ್ಲಿಯೋ ಹೋಗಿದ್ದು, ಈವರೆಗೆ ಮರಳಿ ಮನೆಗೆ ಬಂದಿಲ್ಲ. ಸಂಬoಧಿಕರ ಮನೆಗೂ ತೆರಳಿಲ್ಲ , ಅತ್ತ, ತವರು ಮನೆಗೂ ಹೋಗಿಲ್ಲ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆ ವಿವಾಹಿತ ಮಹಿಳೆ ಮತ್ತು ಮಗು ಎಲ್ಲಿಯಾದರೂ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ