Important
Trending

ಲಾರಿ ಅಪಘಾತ: ಕೋಲು ಹಾಗೂ ಸ್ಪಾನರ್‌ನಲ್ಲಿ ಚಾಲಕನಿಗೆ ಮನಬಂದಂತೆ ಹಲ್ಲೆ ಮಾಡಿದ ಮಾಲೀಕ: ಘಟನೆಗೆ ಎಲ್ಲೆಡೆ ಖಂಡನೆ

ಲಾರಿ ಮಾಲಿಕನೊಬ್ಬ ಚಾಲಕನಿಗೆ ಮನಬಂದoತೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಲೀಕನ ಕೃತ್ಯಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿಯಿಂದ ಗೋವಾಕ್ಕೆ ಕಾಕಂಬಿ ಸಾಗಿಸುತ್ತಿದ್ದ ಟ್ಯಾಂಕರ್, ತಾಲೂಕಿನ ಅರಬೈಲು ಘಟ್ಟ ಪ್ರದೇಶದಲ್ಲಿ ಅಪಘಾತವಾಗಿತ್ತು. ರಸ್ತೆ ಪಕ್ಕದಲ್ಲಿ ಲಾರಿ ಜಾರಿ ಗುಡ್ಡಕ್ಕೆ ತಗುಲಿ ನಿಂತಿತ್ತು. ಇನ್ನು ಅಪಘಾತಕ್ಕೆ ಚಾಲಕ ಕುಡಿದು ಸಾಗಿಸುತ್ತಿದ್ದದ್ದೇ ಕಾರಣ ಎನ್ನಲಾಗಿದೆ.

ಲಾರಿಯಲ್ಲಿ ಗೋವಾ ಮದ್ಯದ ಬಾಟಲಿಯನ್ನೂ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಯಲ್ಲಾಪುರದಲ್ಲಿ ನಡೆದ ಅಪಘಾತದ ಸಂದರ್ಭದಲ್ಲಿ ಪೊಲೀಸರೇ ವಾಹನವನ್ನ ಮೇಲೆತ್ತಲು ಸಹಾಯ ಮಾಡಿ, ಭಾನುವಾರವೇ ಸ್ಥಳದಿಂದ ಅವರನ್ನು ಕಳುಹಿಸಲಾಗಿತ್ತು. ಆದರೆ ಯಾವಾಗ ಮಾಲೀಕ ಚಾಲಕನನ್ನ ಥಳಿಸುವ ವಿಡಿಯೋ ವೈರಲ್ ಆಯಿತೋ, ಆಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ತನಿಖೆ ನಡೆಸುವಂತೆ ಯಲ್ಲಾಪುರ ಪೊಲೀಸರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭವಿಸಿದೆ..

ಘಟನೆ ಸಂಬoಧ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿ ಮಾಲೀಕನ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ವರಿಷ್ಠಾಧಿಕಾರಿ ಸೂಚಿಸಿದ್ದು, ಯಲ್ಲಾಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಲಾರಿ ಮಾಲೀಕ, ಕೋಲು ಹಾಗೂ ಬೋಲ್ಟ್ ಟೈಟ್ ಮಾಡುವ ಸ್ಪಾನರ್‌ನಲ್ಲಿ ಚಾಲಕನಿಗೆ ಮನಬಂದoತೆ ಹಲ್ಲೆ ಮಾಡಿದ್ದಾನೆ. ಸಾರ್ವಜನಿಕವಾಗಿಯೇ ಮನಬಂದoತೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಸಹ ಮಾಡಿದ್ದಾನೆ.

ಮಾಲೀಕ ಚಾಲಕನಿಗೆ ಹಲ್ಲೆ ಮಾಡುವ ವಿಡಿಯೋ ಮಾಡಿಕೊಂಡಿರುವ ವ್ಯಕ್ತಿಯೋರ್ವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಬೆಂಗಳೂರಿನ ಲಯನ್ ಜಯರಾಜ್ ನಾಯ್ದು ಎನ್ನುವವರು ತಮ್ಮ ಫೇಸ್‌ಬುಕ್ ಪೇಜಿನಲ್ಲಿ ಮೊದಲು ಈ ವಿಡಿಯೋ ಶೇರ್ ಮಾಡಿದ್ದು, ನಂತರದಲ್ಲಿ ವಿಡಿಯೋ ಸಾಕಷ್ಟು ಶೇರ್ ಆಗಿದೆ. ಅಲ್ಲದೇ ಮಾಲೀಕ ಚಾಲಕನಿಗೆ ಥಳಿಸಿದ್ದಕ್ಕೆ ಖಂಡನೆ ಸಹ ವ್ಯಕ್ತವಾಗಿದೆ.

ಒಂದೊಮ್ಮೆ ಚಾಲಕ ತಪ್ಪೇ ಮಾಡಿದ್ದರೆ ಪೊಲೀಸರಿಗೆ ತಿಳಿಸಬೇಕಿತ್ತು. ಅದನ್ನ ಬಿಟ್ಟು ಸಾರ್ವಜನಿಕವಾಗಿ ಮಾಲೀಕ ಥಳಿಸುವುದು ಸರಿಯಲ್ಲ ಮಾತುಗಳು ಕೇಳಿಬರುತ್ತಿವೆ. ಘಟನೆ ಬಗ್ಗೆ ಚಾಲಕರ ಸಂಘದವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಘಟನೆಯನ್ನ ಖಂಡಿಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Back to top button