ಪಂಡಿತ್ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮ : ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಆಯೋಜನೆ
ಕುಮಟಾ: ಪಂಡಿತ್ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಪಂಡಿತ್ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಅರ್ಥಪೂರ್ಣವಾಗಿ ನೆರವೇರಿತು., ನಾದ ನಮನ ಕಾರ್ಯಕ್ರಮದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ, ಶ್ರೀಧರ ಹೆಗಡೆ ಕಲ್ಭಾಗ, ಶ್ರೀಲತಾ ಗುರುರಾಜ ಆಡುಕಳ ಅವರಿಂದ ಗಾಯನ, ಈಶ್ವರ ಶಾಸ್ತ್ರಿ ಬೋಳ್ತಟ್ಟೆ ಅವರಿಂದ ಕೊಳಲು ವಾದನ ಗಮನಸೆಳೆಯಿತು..
ತಬಲಾದಲ್ಲಿ ಎನ್.ಜಿ. ಅನಂತಮೂರ್ತಿ ಗುಣವಂತೆ, ಶಂತನು ಶುಕ್ಲ ಮುಂಬೈ, ಗುರುರಾಜ ಹೆಗಡೆ ಆಡುಕಳ, ಅಕ್ಷಯ ಭಟ್ಟ ಹಂಸಳ್ಳಿ ಸಹಕರಿಸುವರು. ಸಂವಾದಿನಿಯಲ್ಲಿ ಗೌರೀಶ ಯಾಜಿ ಕೂಜಳ್ಳಿ, ಅಜೇಯ ಹೆಗಡೆ ಶಿರಸಿ ಸಾಥ್ ನೀಡುವರು.
ನುಡಿ ನಮನ ಕಾರ್ಯಕ್ರಮದಲ್ಲಿ ಎಮ್ ಟಿ ಎನ್ ಎಲ್ ನಿವೃತ್ತ ಡಿಜಿಎಂ ರಮೇಶ ಎಸ್. ಹೆಗಡೆ, ಕೂಜಳ್ಳಿ ಸ್ವರ ಸಂಗಮದ ಅಧ್ಯಕ್ಷ ಸುಬ್ರಾಯ ಜಿ. ಭಟ್ಟ, ಚಾರ್ಟರ್ಡ್ ಎಕೌಂಟಟ್ ವಿನಾಯಕ ಹೆಗಡೆ ಪಾಲ್ಗೊಂಡಿದ್ದರು. ಪಂ. ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸಿದ್ದರು.
ವಿಸ್ಮಯ ನ್ಯೂಸ್, ಕುಮಟಾ