Follow Us On

WhatsApp Group
Focus News
Trending

ಶ್ರಮ ಜೀವನ ನಡೆಸಿದ ಆದರ್ಶ ಮಹಿಳೆ ಬಾಸಗೋಡ ದೇವಮ್ಮ ನಾಯಕ ವಿಧಿವಶ

ಅಂಕೋಲಾ: ಬಾಸಗೋಡ ಗ್ರಾಮದ ಹಿರಿಯ ಮಹಿಳೆ ದೇವಮ್ಮ ರಾಮಚಂದ್ರ ನಾಯಕ (93 ), ಮಂಗಳವಾರ ಬಾಸಗೋಡದ ಸ್ವಗೃಹದಲ್ಲಿ ನಿಧನರಾದರು.,ರೈತಾಬಿ ಹಾಗೂ ಹೈನುಗಾರಿಕೆ ಮೂಲಕ ಶ್ರಮ ಜೀವನ ನಡೆಸಿ,ಆದರ್ಶ ಮಹಿಳೆಯಾಗಿ ಗುರುತಿಸಿಕೊಂಡಿದ್ದ ದೇವಮ್ಮ ನಾಯಕ,ಯಕ್ಷರಂಗದ ಕಂಚಿನ ಕಂಠದ ಭಾಗವತರೆಂದೇ ಖ್ಯಾತರಾಗಿದ್ದ ಮೋನಪ್ಪ ಬೀರಣ್ಣ ನಾಯಕ ಇವರ ಸೊಸೆ.

ಊರಿನ ಎಲ್ಲ ಹಿರಿ-ಕಿರಿಯ ರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಮೃತರು, ತಮ್ಮ ಆತ್ಮೀಯ ವಲಯದಲ್ಲಿ ದ್ಯಾಮಕ್ಕ, ದ್ಯಾಮವ್ವ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದರು. ಮೃತರು ತಮ್ಮ ಮಕ್ಕಳಾದ ಗಣಪತಿ, ಮಂಜುನಾಥ, ಉದಯ, ಮಧುಕರ, ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ತೊರೆದಿದ್ದಾರೆ. ಮೃತರ ಕುಟುಂಬ ವರ್ಗದವರು,ಬಂಧುಗಳು, ಊರ ನಾಗರಿಕರು ಮತ್ತಿತರರು ಹಿರಿಯ ಜೀವದ ಅಂತಿಮ ದರ್ಶನ ಪಡೆದುಕೊಂಡರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button