Important
Trending

ಗದ್ದೆಗೆ ಹೋಗಿ ಬೇಲಿ ಕಟ್ಟಿ ಬರುತ್ತೇನೆ ಎಂದು ಹೋದ ಗಂಡ ನಾಪತ್ತೆ: ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ಹೆಂಡತಿ

ಈತನ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಕುಮಟಾ: ತನ್ನ ಗಂಡ ನಾಪತ್ತೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಮಹಿಳೆಯೊಬ್ಬಳು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಗಸ್ಟ್ 29 ರಂದು ತನ್ನ ಗಂಡ ಗದ್ದೆಗೆ ಹೋಗಿ ಬೇಲಿ ಕಟ್ಟಿ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಮರಳಿ ಮನೆಗೆ ಬಂದಿಲ್ಲವಾಗಿದ್ದು, ಹುಡುಕಿಕೊಡುವಂತೆ ಕೋರಿದ್ದಾರೆ.

ಸಾವಿಗೆ ಮುನ್ನ ವಿಡಿಯೋ ಮಾಡಿ ಬಿಡುಗಡೆ: ಮರಕ್ಕೆ ನೇಣು ಬಿಗಿದು ಕೊಂಡು ಮೃತಪಟ್ಟ ಯುವಕ ? ವಿಡಿಯೋದಲ್ಲಿ ಏನಿದೆ ನೋಡಿ?

ತಾಲೂಕಿನ ಕಲಭಾಗ ನಿವಾಸಿ ಕಲ್ಪನಾ ಭಂಡಾರಿ ಎನ್ನುವವರು ದೂರು ದಾಖಲಿಸಿದ ಮಹಿಳೆ. ಪತಿ ಕಮಲಾಕರ ಪುಂಡ್ಲಿಕ್ ಭಂಡಾರಿ (56) ಎಂಬವರು ನಾಪತ್ತೆಯಾದ ವ್ಯಕ್ತಿ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Related Articles

Back to top button