Focus NewsImportant
Trending

ರಾತ್ರಿ ನಾಟಕದಲ್ಲಿ ಅದ್ಬುತವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದ ವ್ಯಕ್ತಿ ಬೆಳಿಗ್ಗೆ ಹೃದಯಘಾತದಿಂದ ಸಾವು

ನಾಟಕದಲ್ಲಿ ಪಾತ್ರಕ್ಕೆ ಜೀವ ತುಂಬುತ್ತಿದ್ದ ಅದ್ಭುತ ಕಲಾವಿದ

ಹೊನ್ನಾವರ: ಆತ ರಾತ್ರಿ ಊರಿನಲ್ಲಿ ನಡೆದ ನಾಟಕದಲ್ಲಿ ಪಾತ್ರ ಮಾಡಿ ಎಲ್ಲರ ಗಮನಸೆಳೆದಿದ್ದ. ಆದರೆ, ಬೆಳಿಗ್ಗೆ ಆತ ನಿಧನವಾಗಿದ್ದಾನೆ ಎಂಬ ಸುದ್ದಿ. ಹೌದು, ರಾತ್ರಿ ನಾಟಕದಲ್ಲಿ ಪಾಲ್ಗೊಂಡು ಅತ್ಯತ್ತಮವಾಗಿ ಪಾತ್ರ ನಿರ್ವಹಿಸಿದ್ದ ವ್ಯಕ್ತಿ ಬೆಳಿಗ್ಗೆ ಹೃದಯಘಾತದಿಂದ ನಿಧನ ಹೊಂದಿದ ಘಟನೆ ಹೊನ್ನಾವರ ತಾಲೂಕಿನ ಮೂಡ್ಕಣಿಯಲ್ಲಿ ನಡೆದಿದೆ. ಮೂಡ್ಕಣಿಯ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ರಾತ್ರಿ ನಡೆದ ನಾಟಕದಲ್ಲಿ ಅದ್ಬುತ ಕಲಾ ಪ್ರತಿಭೆ ಮೆರೆದು ಪ್ರೇಕ್ಷಕರ ಮನಗೆದ್ದಿದ್ದ ಉದಯ ನಾಯ್ಕ ಮೂಡ್ಕಣಿ ಹೃದಯಘಾತದಿಂದ ಸಾವು ಕಂಡಿದ್ದಾರೆ.

ಸಾವಿಗೆ ಮುನ್ನ ವಿಡಿಯೋ ಮಾಡಿ ಬಿಡುಗಡೆ: ಮರಕ್ಕೆ ನೇಣು ಬಿಗಿದು ಕೊಂಡು ಮೃತಪಟ್ಟ ಯುವಕ ? ವಿಡಿಯೋದಲ್ಲಿ ಏನಿದೆ ನೋಡಿ?

ತಾಲೂಕಿನ ಒಬ್ಬ ಅದ್ಭುತ ರಂಗಭೂಮಿ ಕಲಾವಿದರಾಗಿ, ಸಾಮಾನ್ಯವಾಗಿ ಎಲ್ಲೆ ನಾಟಕ ನಡೆದರು ಖಳನಾಯಕ, ಕಥಾನಾಯಕ ಇನ್ನುಳಿದ ಪಾತ್ರಕ್ಕೆ ಬಣ್ಣ ಹಚ್ಚಿ, ಪಾತ್ರಕ್ಕೆ ಜೀವ ತುಂಬುತ್ತಿದ್ದರು ಉದಯ್ ನಾಯ್ಕ. ಭಾರತ ಸೇವಾದಳದ ಜಿಲ್ಲಾ ಸಮೀತಿಯ ಸದಸ್ಯರಾಗಿಯು ಸೇವೆ ಸಲ್ಲಿಸುತ್ತಿದ್ದ ಉದಯ ನಾಯ್ಕ, ವೃತ್ತಿಯಲ್ಲಿ ಕೃಷಿಕನಾಗಿ, ಜೆಸಿಬಿ, ಟಿಪ್ಪರ್ ಹೊಂದಿ, ಗುತ್ತಿಗೆ ಕೂಡ ಮಾಡುತ್ತಿದ್ದರು, ಸಾಮಾಜಿಕವಾಗಿ ಎಲ್ಲರೊಂದಿಗೂ ಅನ್ಯೋನ್ಯವಾಗಿರುವ ಇವರು ತನ್ನ ಚಿಕ್ಕಪ್ಪ ಪಿ. ಟಿ. ನಾಯ್ಕ ಮತ್ತು ಅಣ್ಣ ದಿ. ಪಿ. ಎಂ. ನಾಯ್ಕ ರವರ ರಾಜಕೀಯ ಏಳಿಗೆಗೆ ಶ್ರಮ ಪಡುತ್ತಿದ್ದರು.

drama artist

ಮೃತ ಉದಯ ನಾಯ್ಕ ಪತ್ನಿ, ಮಗ, ಮಗಳು ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಉದಯ ನಾಯ್ಕ ಕುಟುಂಬ ತಾಲೂಕಿನಲ್ಲಿ ರಾಜಕೀಯ ಮತ್ತು ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಕುಟುಂಬವಾಗಿದ್ದು, ಕೆಲವು ವರ್ಷದ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪಿ. ಎಂ. ನಾಯ್ಕ ಮೃತ ಪಟ್ಟಿದ್ದರು, ಇದೀಗ ಉದಯ ಸಾವು ಕುಟುಂಬಕ್ಕೆ ಆಘಾತ ಉಂಟುಮಾಡಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button