ದಿನಕರ ವೇದಿಕೆಯಿಂದ ಅಂಕೋಲಾದ ಪಿ.ಎಂ.ಹೈಸ್ಕೂಲಿನ ಸಭಾಭವನದಲ್ಲಿ ಚೀನಾದ ದಾಳಿಯಿಂದ ಭಾರತದ ಗಡಿ ರಕ್ಷಣೆ ಸಂದಭ೯ದಲ್ಲಿ ಹುತಾತ್ಮರಾದ ವೀರಯೋಧರರಿಗೆ ಪುಷ್ಪ ಸಮಪಿ೯ಸಿ, ಮೇಣದ ಬತ್ತಿ ಹಚ್ಚಿ, ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಾರಂಭದಲ್ಲಿ ವೇದಿಕೆಯ ಕಾಯ೯ದಶಿ೯ಗಳಾದ ಶ್ರೀ ಸಂದೇಶ ಉಳ್ಳಿಕಾಶಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಂತರ ಡಾ//ಅಚ೯ನಾ ನಾಯಕ ಕೊರೊನಾ ಮತ್ತು ಚೀನಾ ದಾಳಿಯನ್ನು ಹಿಮ್ಮೆಟ್ಟಸಲು ನಾವು ಅನುಸರಿಸಿಬೇಕಾದ ಮಾಗ೯ಗಳ ಕುರಿತು ವಿವರಿಸಿದರು. ವಕೀಲರಾದ ಶ್ರೀ ನಾಗಾನಂದ ಆಯ್ ಬಂಟ, ಶ್ರೀ ಎನ್ ವಿ.ರಾಠೋಡ ಮಾತನಾಡಿ ಹುತಾತ್ಮರಾದ ವೀರಯೋಧರ ಗುಣಗಾನ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷರಾದ ಶ್ರೀ ರವೀಂದ್ರ ವಿ ಕೇಣಿಯವರು ಭಾವನಾತ್ಮಕ ಸಂದೇಶಗಳಿಗಿಂತ ಭಾರತೀಯರಾದ ನಾವು ಬಾಹ್ಯ ಸವಾಲುಗಳನ್ನು ಹೇಗೆ ಎದುರಿಸುವುದೆಂಬ ಕುರಿತು ಮಾತನಾಡಿದರು.ಕೊನೆಯಲ್ಲಿ ವೇದಿಕೆಯ ಸಂಘಟನಾ ಕಾಯ೯ದಶಿ೯ಗಳಾದ ಶ್ರೀ ಸಂತೋಷ ನಾಯಕ ಚೀನಾ ದೇಶ 1962 ರಿಂದ ಇಲ್ಲಿಯವರೆಗೆ ಅನುಸರಿಸಿಕೊಂಡುಬಂದ ಷಡ್ಯಂತರದ ಕುರಿತು ವಿವರವಾಗಿ ತಿಳಿಸಿ ಸಭಿಕರ ಅಭಾರ ಮನ್ನಿಸಿದರು.
ಅಥ೯ಪೂರ್ಣವಾಗಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಮತಿ ಶೀಲಾ ಬಂಟ, ಶ್ರೀ ಖೇಮು ನಾಯ್ಕ, ಶ್ರೀ ಶಾಯೀಷಕುಮಾರ ಕೇಣಿಕರ, ಶ್ರೀ ದುಗಾ೯ನಂದ ದೇಸಾಯಿ, ಶ್ರೀ ಎಂ. ಎಚ್.ಗೌಡ,ಶ್ರೀ ಶಂಕರ ನಾಯ್ಕ, ಶ್ರೀಮತಿ ಮಂಜುಳಾ ಬಂಟ , ಶ್ರೀ ವಿಕ್ರಾಂತ ಕೇಣಿ ಶ್ರೀ ಮಿಥುನ ಮುಂತಾದವರು ಪಾಲ್ಗೊಂಡಿದ್ದರು. ಅಧ್ಯಕ್ಷರು ಮತ್ತು ಪದಾಧಿಕಾರಿಗಳ ದಿನಕರ ವೇದಿಕೆ ಅಂಕೋಲಾ (ಉ.ಕ.)
-ವಿಸ್ಮಯ ನ್ಯೂಸ್ ವಿಲಾಸ್ ನಾಯಕ,ಅಂಕೋಲಾ