Follow Us On

WhatsApp Group
Important
Trending

ಕಡಲತೀರದಲ್ಲಿ ಚಿರತೆಯ ಮೃತದೇಹ ಪತ್ತೆ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮದ ಹುಬ್ಬಣಗೇರಿಯ ಪದವಿಪೂರ್ವ ಕಾಲೇಜಿನ ಹಿಂಭಾಗದ ಕಡಲತೀರದಲ್ಲಿ ಚಿರತೆಯ ಮೃತ ದೇಹ ಪತ್ತೆಯಾಗಿದೆ. ಈ ಸಂಬoಧ ಸ್ಥಳೀಯರು ಮಾಹಿತಿ ನೀಡಿದ್ದು, ಎಸಿಎಫ್ ಮತ್ತಯ ಆರ್ ಎಫ್ ಓ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದು ಸುಮಾರು ಮೂರುವರ್ಷದ ಗಂಡು ಚಿರತೆ ಎಂದು ತಿಳಿದುಬಂದಿದೆ. ಚಿರತೆ ಹೇಗೆ ಸತ್ತಿರಬಹುದು ಎಂಬ ಬಗ್ಗೆ ಇದುವರೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ, ಆಹಾರಕ್ಕಾಗಿ ಬಂದಾದ ಸಮುದ್ರದಲ್ಲಿ ಆಯತಪ್ಪಿ ಬಿದ್ದಿದ್ದು, ಸಮುದ್ರದ ರಭಸದಿಂದ ತಪ್ಪಿಸಿಕೊಳ್ಳದೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button