Important
Trending

ಸೇತುವೆಯಲ್ಲಿ ನೀರಿನ ಸೆಳತಕ್ಕೆ ಸಿಲುಕಿದ ಲಾರಿ: ಐವರ ರಕ್ಷಣೆ: ಲಾರಿಯಲ್ಲಿದ್ದ ಓರ್ವನಿಗಾಗಿ ಪತ್ತೆಕಾರ್ಯ

ನಿಯಂತ್ರಣ ತಪ್ಪಿ ನೀರಿನ ಸೆಳೆತಕ್ಕೆ ಸಿಲುಕಿ ಅವಾಂತರ

ಅಂಕೋಲಾ: ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಗಂಗಾವಳಿ ನದಿಗೆ ಅಡ್ಡಲಾಗಿ  ಪಣಸಗುಳಿ ಕಚ್ಚಾ ಸೇತುವೆ ಇದ್ದು ನೀರಿನ ಹರಿವು ಕಡಿಮೆ ಇದ್ದಾಗ ಇಲ್ಲಿ ಓಡಾಟ ನಡೆಸಲಾಗುತ್ತಿದ್ದು, ಅಲ್ಲಿಂದ ಸಾಗುತ್ತಿದ್ದ  ಲಾರಿಯೊಂದು ನಿಯಂತ್ರಣ ತಪ್ಪಿ ನೀರಿನ ಸೆಳೆತಕ್ಕೆ ಸಿಲುಕಿ ಅವಾಂತರ ಆಗಿದೆ ಎನ್ನಲಾಗಿದೆ. ಈ ಅವಘಡ ಸಂಭವಿಸುವ ವೇಳೆ ಲಾರಿಯಲ್ಲಿ 6 ಜನರಿದ್ದರು ಎನ್ನಲಾಗಿದೆ.

ಜಿಂಕೆ ಸಾಯಿಸಿ ಊಟ ತಯಾರಿಸುತ್ತಿದ್ದಾಗಲೇ ಬೇಟೆಗಾರನ ಬಂಧನ| ತಲೆಮರೆಸಿ ಕೊಂಡ ಇನ್ನೋರ್ವ ಆರೋಪಿತನ ಪತ್ತೆಗೆ ಬಲೆ ಬೀಸಿದ ಇಲಾಖೆ

ಗುಳ್ಳಾಪುರದಿಂದ ಬೋಟ್ ತಂದು   5 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೋರ್ವ ಲಾರಿಯ ಒಳಗೆ ಸಿಲುಕಿಕೊಂಡಿದ್ದಾನೆ ಎನ್ನಲಾಗಿದ್ದು ಆತನ ಪತ್ತೆ ಕಾರ್ಯ ಕಷ್ಟ ಸಾಧ್ಯವಾಗಿದೆ. ಘಟನೆ ಕುರಿತಂತೆ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಡಿಯೋ ಇಲ್ಲಿದೆ ನೋಡಿ

ಸುದ್ದಿ ತಿಳಿದ ಅಂಕೋಲಾ ತಹಶೀಲ್ದಾರ್,ಹಾಗೂ ಯಲ್ಲಾಪುರ  ತಾಲೂಕುಗಳ ಸಂಬಂಧಿತ ಕಂದಾಯ , ಪೋಲೀಸ್, ಮತ್ತಿತರ ಇಲಾಖೆಗಳ ಅಧಿಕಾರಿಯಾಗಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮಾಹಿತಿ ಕೇಳಿಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button