Focus News
Trending

ಕ್ರೀಡೆಯಿಂದ ಮಾನಸಿಕ ನೆಮ್ಮದಿ: ಜೊತೆಗೆ ಆರೋಗ್ಯಕರ ಜೀವನಕ್ಕೆ ಸಹಕಾರಿ

ಸಿದ್ದಾಪುರ: ಕ್ರೀಡೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಲಿದೆ. ಯುವಕರು ಮೊಬೈಲ್ ನಿಂದ ದೂರ ಬರಬೇಕಾದರೆ ಕ್ರೀಡೆ, ಸಾಂಸ್ಕೃತಿಕ ಮುಂತಾದ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬೇಡ್ಕಣಿ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣ ಮರ‍್ತಿ ಮಡಿವಾಳ ಕಡಕೇರಿ ಹೇಳಿದರು. ಅವರು ಕಡಕೇರಿ ಗಾಂಧಿ ಮೈದಾನ ಹಾಗೂ ಸುಭಾಷ್ ಚಂದ್ರ ಬೋಸ್ ಮೈದಾನ ದಲ್ಲಿ ಪ್ರೇಂಡ್ಸ ಕ್ರಿಕೆರ‍್ಸ್ ಕಡಕೆರಿ ಹಾಗೂ ನಾಗರಿಕರ ಸಂಯೋಜನೆಯಲ್ಲಿ ಆಯೋಜನೆಗೊಂಡಿದ್ದ ಟೆನಿಸ್ ಹರ‍್ಡ ಬಾಲ್ ಕ್ರಿಕೆಟ್ ಟರ‍್ನಮೆಂಟ್ ಉದ್ಘಾಟಿಸಿ ಮಾತನಾಡಿದರು.

ಸಂಘಟನೆ ಸುಲಭವಾಗಿರುವುದಿಲ್ಲ ಎಲ್ಲರೂ ಒಗ್ಗಟ್ಟಾಗಿ ಕೆಲಸಗಳನ್ನು ಮಾಡಿದಾಗ ಮಾತ್ರ ಕರ‍್ಯಗಳು ಯಶಸ್ವಿಯಾಗಿ ಕೈಗೂಡುತ್ತದೆ. ಹಾಗೆ ಕಡಕೇರಿ ಹಿರಿಯರು ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಊರಿನ ಕರ‍್ತಿ ಪತಾಕೆಯನ್ನು ಹಾರಿಸಿದ್ದಾರೆ . ಇಂದಿನ ಯುವಕರು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವುದು ಉತ್ತಮವಾದ ಬೆಳವಣಿಗೆ. ಸಂಘಟನೆ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರಬಾರದು ಊರಿನ ಅಭಿವೃದ್ಧಿ ಕರ‍್ಯಗಳಿಗೆ ಯುವಕರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ಬಂದ ಹಣದಲ್ಲಿ ಉಳಿಕೆಯ ಹಣವನ್ನು ಪ್ರಗತಿಪರ ಚಟುವಟಿಕೆಗಳಿಗೆ ಉಪಯೋಗ ಮಾಡಬೇಕು ಎಂದು ಹೇಳಿದರು.

ಆನಂದ ನಾಯ್ಕ, ಮಾರುತಿ ಮಡಿವಾಳ ದಯಾನಂದ ಜಿ ನಾಯ್ಕ, ಗಣಪತಿ ನಾಯ್ಕ, ಶಿವಕುಮಾರ ನಾಯ್ಕ ವೇದಿಕೆ ಯಲ್ಲಿದ್ದರು. ಸುರೇಶ ಮಡಿವಾಳ ಸ್ವಾಗತಿಸಿ, ವಂದಿಸಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಿ ಭಾಗವಹಿಸಿದ್ದವು. ಹರಕನಹಳ್ಳಿ ತಂಡವು ಪ್ರಥಮ ಬಹುಮಾನವನ್ನು ಹಾಗೂ ಹಾಳದಕಟ್ಟಾ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡವು.

Back to top button