ಬಡ್ಡಿ ವ್ಯವಹಾರದ ವೇಳೆ ಅನೈತಿಕ ಸಂಬoಧ ಹುಟ್ಟಿಕೊಂಡು, ಒಬ್ಬನ ಜೀವ ಹೋಗಿದೆ. ಇನ್ನು ಮೂವರು ಜೈಲು ಸೇರಿದ್ದಾರೆ. ಪೊಲೀಸರು ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮುoಡಗೋಡ: ಕೆರೆಯಲ್ಲಿ ಬೈಕ್ ಸಹಿತ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ರಹಸ್ಯವನ್ನು ಬೇಧಿಸಿದ್ದಾರೆ.ಹೌದು, ಹನುಮಾಪುರ ರಸ್ತೆಯ ಕಲ್ಲೋಳ್ಳಿ ಸೇತುವೆ ಬಳಿ ನಡೆದ ಕೊಲೆಯ ಒಂದು ಯೋಜಿತ ಕೊಲೆ ಎಂದು ಶಂಕಿಸಿ, ತನಿಖೆಗೆ ಇಳಿದಿದ್ದರು ಪೊಲೀಸರು.ಅತಿ ಕಡಿಮೆ ಸಮಯದಲ್ಲೇ ಕೊಲೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಕೊಲೆಯಾದ ಮೆಹಬೂಬಾ ಅಲಿ ಚೀಟಿ ವ್ಯವಹಾರ ನಡೆಸುತ್ತಿದ್ದ. ಈತನಿಗೆ ಇಬ್ರಾಹಿಂ ಸಾಥ್ ನೀಡುತ್ತಿದ್ದ, ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ. ಈ ವೇಳೆ ಇಬ್ರಾಹಿಂ ಕೆಲ ಚೀಟಿಯ ಹಣವನ್ನು ಉಳಿಸಿಕೊಂಡಿದ್ದ. ಹೀಗಾಗಿ ವಸೂಲಿಗಾಗಿ ಮೆಹಬೂಬಾ ಆಗಾಗ ಇಬ್ರಾಹಿಂ ಮನೆಗೆ ಬರುತ್ತಿದ್ದ. ಈ ವೇಳೆ ಆರೋಪಿ ಇಬ್ರಾಹಿಂ ಹೆಂಡತಿಯ ಮೇಲೆ ಕಣ್ಣು ಹಾಕಿ ಬಲೆಯಲ್ಲಿ ಬೀಳಿಸಿಕೊಂಡ. ಕೆಲ ದಿನಗಳ ಹಿಂದೆ ಇಬ್ರಾಹಿಂಗೆ ತನ್ನ ಹೆಂಡತಿಯ ನಿಜ ರೂಪ ದರ್ಶನವಾಗಿದೆ ಎನ್ನಲಾಗಿದೆ.
ಇದರಿಂದಕುಪಿತಗೊoಡು ಹೇಗಾದರೂ ಜಮಖಂಡಿಯನ್ನು ಮುಗಿಸಿ ಬಿಡುವ ವಿಚಾರಕ್ಕೆ ಬಂದು ಲಕ್ಕೊಳ್ಳಿ ಗ್ರಾಮದ ಹೊರಗಿರುವ ತಮ್ಮ ಮನೆಗೆ ಕರೆಸಿ ಮಾತಿಗೆ ಮಾತು ಬೆಳೆದು ಇಬ್ರಾಹಿಂ ಮತ್ತು ಜಮಖಂಡಿಯ ಜಗಳವಾಗಿ ಇಬ್ರಾಹಿಂ ಮಾರಣಾಂತಿಕವಾಗಿ ಹಲ್ಲೆಗೈದಾಗ ಮೆಹಬೂಬಲಿ ಜಮಖಂಡಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕೊಲೆಗೈದ ಇಬ್ರಾಹಿಂ ನಂತರ ಮುಂಡಗೋಡದಲ್ಲಿರುವ ತನ್ನ ಅಣ್ಣ ಶರೀಫ್ ಶಿಗ್ಗಾಂವ್ ನನ್ನು ಸಂಪರ್ಕಿಸಿ ವಿಷಯವನ್ನು ತಿಳಿಸಿ ತನ್ನ ಮನೆಯಿಂದ ಇಬ್ಬರೂ ಸೇರಿ ಶವವನ್ನು ಮೃತ ಜಮಖಂಡಿಯ ಬೈಕ್ ಮೇಲೆಯೇ ಲಕ್ಕೊಳ್ಳಿಯ ಮನೆಯಿಂದ ಕಲ್ಲೋಳಿಯ ಕೆರೆಯ ಹತ್ತಿರ ಒಯ್ದು ಕೆರೆಯಲ್ಲಿ ಹಾಕಿ ಅಪಘಾತದಲ್ಲಿ ಮೃತಪಟ್ಟಂತೆ ಬಿಂಬಿಸಲು ಪ್ರಯತ್ನಿಸಿದ್ದರು. ಬಡ್ಡಿ ವ್ಯವಹಾರ ಅನೈತಿಕ ಸಂಬoಧಕ್ಕೆ ತಿರುಗಿ ಒಬ್ಬನ ಜೀವ ಹೋಯಿತಲ್ಲದೆ ಇನ್ನು ಮೂವರು ಜೈಲು ಸೇರುವಲ್ಲಿಗೆ ಪ್ರಕರಣ ಅಂತ್ಯವಾಗಿದೆ.
ವಿಸ್ಮಯ ನ್ಯೂಸ್, ಕಾರವಾರ