Follow Us On

WhatsApp Group
Important
Trending

ಬಹಿರ್ದೆಸೆಗೆ ಹೋಗಿದ್ದ ವೇಳೆ ಕಂಡ ನಿಗೂಢ ವಸ್ತುವನ್ನು ಎತ್ತಿಕೊಂಡು ಒತ್ತಿದ: ಸ್ಫೋಟಕ್ಕೆ ಮೂರು ಬೆರಳು ತುಂಡು

ಮುಂಡಗೋಡ: ವ್ಯಕ್ತಿಯೋರ್ವ ಬಹಿರ್ದೆಸೆಗೆ ಹೋಗಿದ್ದರು. ಈ ವೇಳೆ ಅವರಿಗೆ ಹೊಳಪಿರುವ ವಸ್ತುವೊಂದು ಕಂಡಿದೆ. ಹೀಗಾಗಿ ಕುತೂಹಲದಿಂದ ಹತ್ತಿರಹೋಗಿ ನಡೆದಿದ್ದಾರೆ. ಆದರೂ ಆ ವಸ್ತುವಿನ ಸುಳಿವು ಸಿಗಲಿಲ್ಲ. ಕೂತುಹಲ ಹೆಚ್ಚಾಗಿ ಅದನ್ನು ಕೈಯಲ್ಲಿ ಹಿಡಿದುಕೊಂಡು, ಒತ್ತಿದ್ದಾರೆ. ಕೂಡಲೇ ಅದು ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಮೂರು ಬೆರಳುಗಳು ತುಂಡಾಗಿವೆ. ಕಾಲಿಗೂ ಗಾಯವಾಗಿದ್ದು, ಸ್ಫೋಟದ ಬಳಿಕ ಇದು ನಾಡಬಾಂಬ್ ಎಂದು ಅವರಿಗೆ ಅರಿವಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button