Important
Trending

ಗೋಕರ್ಣದಲ್ಲಿ ಜಪಾನ್ ಮಹಿಳೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಸುರಕ್ಷಿತವಾಗಿರುವ ಬಗ್ಗೆ ಪತಿಗೆ ಇಮೇಲ್: ಏನಾಗಿತ್ತು?

ಗೋಕರ್ಣ: ಭಾರತಕ್ಕೆ ಪ್ರವಾಸಕ್ಕೆ ಬಂದು ನಾಪತ್ತೆ ಆಗಿರುವ ಜಪಾನ್ ಮಹಿಳೆಯೋರ್ವಳು ಸುರಕ್ಷಿತವಾಗಿರುವ ಬಗ್ಗೆ ಪತಿಗೆ ಇಮೇಲ್ ಮಾಡಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆ ಜಪಾನ್ ದಂಪತಿಗಳು ತಿರುವನಂತಪುರದಿoದ ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಬಂಗ್ಲೆಗುಡ್ಡೆಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಆದರೆ ವಸತಿ ಗೃಹದಲ್ಲಿದ್ದ ವೇಳೆ ಪತಿಗೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಪತಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗೋಕರ್ಣ ಸಿ.ಪಿ.ಐ ವಸಂತ ಆಚಾರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಖಚಿತ ಮಾಹಿತಿ ಮೇರೆಗೆ ಗೋಕರ್ಣ ಪೊಲೀಸರ ತಂಡ ಕೇರಳದ ತಿರುವನಂತಪುರಕ್ಕೆ ತೆರಳಿದ್ದಾರೆ. ದಂಪತಿಗಳ ನಡುವಿನ ಮನಸ್ತಾಪವೇ ನಾಪತ್ತೆಗೆ ಕಾರಣ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button