Focus News
Trending

ಸಿದ್ದರಾಮಯ್ಯ ಸರ್ಕಾರ ರಾವಣ ರಾಜ್ಯ ಮಾಡಲು ಹೊರಟಿದೆ: ಸಂಸದ ಅನಂತಕುಮಾರ ಹೆಗಡೆ ಲೇವಡಿ

ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಮರಾಜ್ಯ ಮಾಡುವ ಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿದ್ದರೆ, ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್ ಸರಕಾರ ರಾವಣ ರಾಜ್ಯ ಮಾಡಲು ಹೊರಟಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಅವರು ಲೇವಡಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿನ ಬೆಳಗಾದರೆ ಒಂದಲ್ಲ ಒಂದು ದರವನ್ನು ಹೆಚ್ಚಿಸುವುದು ರಾಜ್ಯ ಸರ್ಕಾರದ ವಾಡಿಕೆಯಾಗಿದೆ. ಕಾಂಗ್ರೆಸ್ ಸರಕಾರವು ಸಾರ್ವಜನಿಕರನ್ನು ಹಾಗೂ ಬಡವರನ್ನು ಹೇಗೆ ಲೂಟಿ ಮಾಡುತ್ತಿದೆ ಎಂಬುದನ್ನು ಸಾರ್ವಜನಿಕರೇ ಪರಾಮರ್ಶಿಸಿ ನೋಡಬೇಕಿದೆ ಎಂದಿದ್ದಾರೆ.

ಸ್ಟಾoಪ್ ದರ ಹೆಚ್ಚಿಸಲು ಸಂಬAಧಿಸಿದAತೆ ಗೆಜೆಟ್ ಅಧಿಸೂಚನೆ ಹಾಗೂ ನೂತನ ದರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿ 200 ರಿಂದ 500 ಕ್ಕೆ ಏರಿಸಲಾಗಿದೆ. ಇಂಡೆಮ್ನಿಟಿ ಬಾಂಡ್ 200 ರಿಂದ 500, ಅಫಿಡೆವಿಟ್ 20 ರಿಂದ 100 ರೂಪಾಯಿವರೆಗೆ ಸೇರಿದಂತೆ ಇನ್ನಿತರ ಅನೇಕ ವಿಷಯಗಳಲ್ಲಿ ದರವನ್ನು ಏರಿಸಿ ಸರಕಾರ ಹೊರಡಿಸಿರುವುದುನ್ನು ಸಂಸದ ಅನಂತಕುಮಾರ ಹೆಗಡೆ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಬ್ಯರೋ ರಿಪೋರ್ಟ್, ವಿಸ್ಮಯ ನ್ಯೂಸ್

Back to top button