Focus NewsImportant
Trending

ದೀಪಾವಳಿ ವಿಶೇಷ : ಗಮನಸೆಳೆದ ಹೊಂಡೆಯಾಟ: ಪಪ್ಪಾಯಿ ಕಾಯಿಯನ್ನು ಕವಣೆಯಲ್ಲಿಟ್ಟು ಎದುರಾಳಿಗೆ ಎಸೆತ

ಕುಮಟಾ: ಹಿಂದುಗಳ ಪವಿತ್ರ ಹಬ್ಬ, ದೀಪಗಳ ಹಬ್ಬ ದೀವಾವಳಿಯು ಅನೇಕ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿರುವ ವಿಶೇಷ ಹಬ್ಬವಾಗಿದೆ. ಎಲ್ಲೆಡೆ ದೀಪಾವಳಿಯನ್ನು ಸಡಗರ ಸಂಭ್ರಮದಿoದ ಆಚರಿಸಲಾಗಿದ್ದು, ಅಂತೆಯೇ ಕುಮಟಾ ತಾಲೂಕಿನಲ್ಲಿಯೂ ಸಹ ಈ ವರ್ಷದ ದೀಪಾವಳಿ ಆಚರಣೆ ಅತ್ಯಂತ ಸಡಗರ ಸಂಭ್ರಮದಿoದ ನಡೆದಿದೆ. ದೀಪಾವಳಿಯ ವೇಳೆ ಆಡಲ್ಪದಡುವ ಮನರಂಜನಾ ಆಟಗಳಲ್ಲಿ ಹೊಂಡೆಯಾಟವು ಸಹ ಒಂದಾಗಿದ್ದು, ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕುಮಟಾದ ಈ ಒಂದು ಹೊಂಡೆಯಾಟವು ಸಾಕಷ್ಟು ಜನಪ್ರೀಯತೆ ಹೊಂದಿದೆ. ಹಬ್ಬದ 2 ಹಾಗೂ 3ನೇ ದಿನ ಈ ಒಂದು ಹೊಂಡೆಯಾಟವನ್ನು ನಡೆಸಲಾಗುತ್ತದೆ.

ಜಾನುವಾರುಗಳಿಗೆ ಹಿಂಗಾರ, ಅಡಿಕೆ ಮಾಲೆಗಳಿಂದ ಸಿಂಗಾರ: ಇಲ್ಲಿದೆ ವಿಶೇಷ ಆಚರಣೆ

ಹೌದೂ….ಕುಮಟಾದಲ್ಲಿ ದೀಪಾವಳಿ ಹಿನ್ನಲೆಯಲ್ಲಿ ಇಂದು ಹೊಂಡೆಯಾಟದ ದೃಷ್ಯಾವಳಿಗಳು ಕಂಡುಬoದಿದ್ದು, ಪಟ್ಟಣದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಹೊಂಡೆಯಾಟವನ್ನು ಅತ್ಯಂದ ಸಡಗರ ಸಂಬ್ರಮದಿoದ ಆಡಲಾಯಿತು. ಈ ಒಂದು ಹೊಂಡೆಯಾಟವನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿದ್ದರು. ಪಪ್ಪಾಯಿ ಕಾಯಿಯನ್ನು ಕವಣೆಯಲ್ಲಿಟ್ಟು ಎದುರಾಳಿಗೆ ಬಿರುಸಾಗಿ ಹೊಡೆಯಲಾಗುತ್ತದೆ. ಎದುರಾಳಿಯು ಬಲಗೈಗೆ ಕಂಬಳಿ ಸುತ್ತಿಕೊಂಡು ತನ್ನೆಡೆ ಬಂದ ಪಪ್ಪಾಯಿಯನ್ನು ರಕ್ಷಣಾತ್ಮಕವಾಗಿ ತಡೆಯುತ್ತಾನೆ.

ಹೀಗೆ ಒಬ್ಬರ ನಂತರ ಇನ್ನೊಬ್ಬರು ಸರದಿಯಂತೆ ಕಾಯಿ ಪಪ್ಪಾಯಿಂದ ಹೊಡೆಯುತ್ತಾ ಸಾಗುತ್ತಾರೆ. ಇದೊಂದು ಅಪಾಯಕಾರಿ ಆಟವಾಗಿದ್ದು, ಸ್ವಲ್ಪವೇ ಅಜಾಗರೂಕತೆಯಾದರೂ ಅನಾಹುತ ಕಟ್ಟಿಟ್ಟ ಬುತ್ತಿ ಎನ್ನಬಹುದು. ಆದರೆ ಇಂದು ಕುಮಟಾದಲ್ಲಿ ಎಲ್ಲಾ ರೀತಿಯ ಮುಂಜಾಗೃತ ಕ್ರಮ ವಹಿಸಿ ಜನರು ಹೊಂಡೆಯಾಟವನ್ನು ಆಡಿದ್ದು, ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಯಾವುದೇ ರೀತಿಯ ಅಹಿತಕರ ಘಟನೆಗೆ ಎಡೆಮಾಡಿಕೊದಣತೆ ಹೊಣಡೆಯಾಟವನ್ನು ಆಡಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button