Focus News
Trending

ದಿ. ಡಿ. ದೇವರಾಜ ಅರಸು ಜನ್ಮದಿನಾಚರಣೆ ಪ್ರಯುಕ್ತ ಸಸ್ಯೋತ್ಸವ| ದಿನಕರ ವೇದಿಕೆಯಿಂದ ಅರ್ಥ ಪೂರ್ಣ ಕಾರ್ಯಕ್ರಮ

ಅಂಕೋಲಾ: ದಿನಕರ ವೇದಿಕೆ ಉತ್ತರ ಕನ್ನಡ ಇವರ ಆಶ್ರಯದಲ್ಲಿ ದಿ.ದೇವರಾಜ ಅರಸು ಅವರ ಜನ್ಮದಿನದ ಪ್ರಯುಕ್ತ ಸಸ್ಯೋತ್ಸವ ಕಾರ್ಯಕ್ರಮ ಅಂಬಾರಕೊಡ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುರಸಭೆ ಸದಸ್ಯ ಪ್ರಕಾಶ ಗೌಡ ಅವರು ಮಾತನಾಡಿ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ದೇವರಾಜ ಅರಸು ಅವರ ಸೇವೆ ಸದಾ ಸ್ಮರಣೀಯ ಎಂದರು.

ದಿನಕರ ವೇದಿಕೆ ಸದಸ್ಯ ಎನ್.ಡಿ.ಅಂಕೋಲೆಕರ್ ಮಾತನಾಡಿ ದೇವರಾಜ ಅರಸು ಅವರು ಮುಖ್ಯ ಮಂತ್ರಿಯಾಗಿದ್ದಾಗ ಅಧಿಕಾರಿದ ಕುರಿತು ಚಿಂತನೆ ಮಾಡದೇ ರೈತರು, ದೀನ ದಲಿತರ ಸೇವೆಗೆ ಮಹತ್ವ ನೀಡಿದ್ದರು ಎಂದರು.

ದಿನಕರ ವೇದಿಕೆ ಅಧ್ಯಕ್ಷ ರವೀಂದ್ರ ಕೇಣಿ ಮಾತನಾಡಿ ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸು ಮತ್ತು ಡಾ.ದಿನಕರ ದೇಸಾಯಿ ಅವರ ಸೇವಾ ಮನೋಭಾವ ಸಾಮ್ಯತೆ ಹೊಂದಿವೆ ಎಂದರು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಕು ಗೌಡ ಅವರು ಹತ್ತು ಅಡಿಕೆ ಗಿಡಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.


ದಿನಕರ ವೇದಿಕೆಯ ಕಮಲಾಕರ ಬೋರಕರ್, ವಸಂತ ಗೌಡ, ದುರ್ಗಾನಂದ ದೇಸಾಯಿ ಉಪಸ್ಥಿತರಿದ್ದರು.
ಶಿಕ್ಷಕಿ ಬೇಬಿ ನಾಯಕ ಸ್ವಾಗತಿಸಿದರು.ಕಾರ್ಯಾಧ್ಯಕ್ಷ ಸಂತೋಷ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು, ವಸಂತ ನಾಯ್ಕ ವಂದಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು, ಊರ ನಾಗರಿಕರು ಇತರರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button