Focus News
Trending

ಪತ್ರಕರ್ತರ ಸಂಘದ ಕಾರ್ಡ್ ಬಿಡುಗಡೆ: ವನಮಹೋತ್ಸವ : ಪ್ರತಿಭಾ ಪುರಸ್ಕಾರ

ಅಂಕೋಲಾ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಂಘದ ಕಾರ್ಡ್ ಬಿಡುಗಡೆ,ವನಮಹೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹುಲಿದೇವರವಾಡದ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಭಾಂಗಣದಲ್ಲಿ ರವಿವಾರ ನಡೆಯಿತು.

ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ತಾಲೂಕಿನ ಪತ್ರಕರ್ತರು ಸಮಾಜದಲ್ಲಿನ ಲೋಪದೋಷಗಳನ್ನು ಮತ್ತು ಉತ್ತಮ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ವರದಿ ಮಾಡುತ್ತಿದ್ದಾರೆ ಎಂದರು.

ಪತ್ರಕರ್ತರ ಸಂಘದ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ ತಾಲೂಕಿನ ಪತ್ರಕರ್ತರ ಸಂಘ ಕೇವಲ ವರದಿಗಾರಿಕೆ ಅಷ್ಟೇ ಅಲ್ಲದೇ ಹಲವಾರು ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿ ಅಂಕೋಲಾ ಪತ್ರಕರ್ತರ ಸಂಘ ಜಿಲ್ಲೆಯಲ್ಲಿ ಉತ್ತಮ ಸಂಘ ಎನಿಸಿಕೊಂಡಿದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿ ಸಮಾಜದ ಪ್ರತಿಭೆಗಳ ಕುರಿತು ವರದಿ ಮಾಡುವ ಪತ್ರಕರ್ತರ ಪ್ರತಿಭಾವಂತ ಮಕ್ಕಳ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಎಂದರು.
ಪುರಸಭೆ ಮುಖ್ಯಾಧಿಕಾರಿ ಎನ್. ಎಂ.ಮೇಸ್ತ, ಅಂಕೋಲಾ ಫೌಂಡೇಶನ್ ಅಧ್ಯಕ್ಷ ಮತೀನ್ ಶೇಖ್, ಪುರಸಭೆ ಉಪಾಧ್ಯಕ್ಷೆ ರೇಖಾ ಡಿ ಗಾಂವಕರ್, ಉಪ ವಲಯ ಅರಣ್ಯಾಧಿಕಾರಿ ನಾಗರಾಜ ನಾಯ್ಕ, ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್. ಎಸ್. ಎಲ್. ಸಿ ಪರೀಕ್ಷೆ ಗಮನಾರ್ಹ ಸಾಧನೆ ಮಾಡಿದ ಆದೀಶ ಸುಭಾಸ್ ಕಾರೇಬೈಲ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ರಾಘು ಕಾಕರಮಠ, ಕಾರ್ಯದರ್ಶಿ ಸುಭಾಸ್ ಕಾರೇಬೈಲ್, ಪತ್ರಕರ್ತರಾದ ಕೆ.ರಮೇಶ, ಅಕ್ಷಯ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಸುಬ್ರಹಣ್ಯ ಗಾಂವಕರ, ನಾಗರಾಜ ನಾಯ್ಕ, ನವಾಜ ಶೇಖ್ ಇತರರು ಇದ್ದರು. ವಕೀಲ ನಾಗಾನಂದ ಬಂಟ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಭಾ ಸ್ವಾಗತಿಸಿದರು. ನಾಗರಾಜ ಜಾಂಬಳೇಕರ ನಿರೂಪಿಸಿದರು.ಉಪಾಧ್ಯಕ್ಷ ನಾಗರಾಜ ಮಂಜಗುಣಿ ವಂದಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button