Important
Trending

ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಸೆರೆ: ಕೊನೆಗೂ ಬೋನಿಗೆ ಕೆಡವಿದ ಅರಣ್ಯಾಧಿಕಾರಿಗಳು

ಕುಮಟಾ: ಇತ್ತಿಚಿನ ದಿನಗಳಲ್ಲಿ ಚಿರತೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿರುವ ಪ್ರಕರಣ ಹೆಚ್ಚುತ್ತಲೇ ಇದೆ. ಹೌದು, ಕಳೆದ ಹಲವು ದಿನಗಳಿಂದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪಟ್ಟಣ ವ್ಯಾಪ್ತಿಯ ಜನಸಂದಣಿ ಪ್ರದೇಶದ ಹಲವೆಡೆ ಚಿರತೆ ಕಾಣಿಸಿಕೊಂಡಿತ್ತು. ಹೌದು, ಮನೆಯೊಂದರ ಬಾಗಿಲ ಸಮೀಪ ಬಂದು ನಾಯಿ ಮರಿಯನ್ನೂ ಹೊತ್ತೊಯ್ದಿತ್ತು. ಈ ಎಲ್ಲಾ ಘಟನೆಗಳಿಂದ ಸಾರ್ವಜನಿಕರು ಆತಂಕಗೊoಡಿದ್ದರು. ಚಿರತೆಯ ಭಯದಲ್ಲೇ ಕಾಲ ಕಳೆಯುವಂತಾಗಿತ್ತು.

ಒAದು ತಿಂಗಳಿನಿoದ ತಾಲೂಕಿನ ಹೊಲನಗದ್ದೆ, ಚಿತ್ರಗಿ, ಹಣ್ಣೆಮಠ, ಕಡ್ಲೆ, ವನ್ನಳ್ಳಿ ಮುಂತಾದ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಈ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಹರಸಾಹಸ ಪಟ್ಟಿದ್ದರು. ಮೂರು ಕಡೆ ಬೋನುಗಳನ್ನು ಇಟ್ಟು ಚಿರತೆಯನ್ನು ಸೆರೆಹಿಡಿಯಲು ಯೋಜನೆ ರೂಪಿಸಿದ್ದರು. ಇದೀಗ ಅರಣ್ಯ ಇಲಾಖೆಯ ಯೋಜನೆ ಫಲಿಸಿದ್ದು, ಕೊನೆಗೂ ಬೆಳಗಿನ ಜಾವ ಬೋನಿಗೆ ಚಿರತೆ ಬೋನಿಗೆ ಬಿದ್ದಿದೆ.

ಅಂದಾಜು 2 ವರ್ಷದ ಚಿರತೆ ಇದಾಗಿದ್ದು, ಡಿಎಫ್‌ಓ ಯೋಗೇಶ್ ಮತ್ತು ಎಸಿಎಫ್ ಲೋಹಿತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು. ವಲಯ ಅರಣ್ಯಾಧಿಕಾರಿ ಎಸ್.ಟಿ ಪಟಗಾರ , ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ನಾಯ್ಕ ಮುಂತಾದವರು ಇದ್ದರು. ಇದೀಗ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿದ್ದ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button