Important
Trending

ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ತೆರಳಿದ ವೇಳೆ ದುರಂತ: ಆರು ಮಂದಿ ದುರ್ಮರಣ

ಕಾರವಾರ: ಈಜಾಡಲು ನದಿಗೆ ಇಳಿದ ಹುಬ್ಬಳ್ಳಿ ಮೂಲದ ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ಘಟನೆ ದಾಂಡೇಲಿ ನಗರದ ಸಮೀಪದಲ್ಲಿರುವ ಜೊಯಿಡಾ ತಾಲೂಕು ವ್ಯಾಪ್ತೀಯ ಬಿರಿಂiÀiAಪಾಲಿ ಗ್ರಾಮದ ಅಕೋಡಾದಲ್ಲಿ ನಡೆದಿದೆ. ನದಿಯಲ್ಲಿ ಈಜಾಡಲು ಇಳಿದ ಆರು ಜನರ ಪೈಕಿ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿರುವುದನ್ನು ಗಮನಿಸಿದ ಉಳಿದ ಐವರು ಆಕೆಯನ್ನು ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮಳುಗಿ ಮೃತಪಟ್ಟಿದ್ದಾರೆ. ನಗರದ ಜಂಗಲ್ ಲಾಡ್ಜಸ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಆರು ಜನರ ಶವಗಳನ್ನು ಮೇಲಕ್ಕೆ ಎತ್ತಲಾಗಿದೆ.

ಇದನ್ನೂ ಓದಿ: RPF Recruitment 2024: 4208 ಹುದ್ದೆಗಳಿಗೆ ನೇಮಕಾತಿ: SSLC ಆದವರು Apply ಮಾಡಿ

ಹುಬ್ಬಳ್ಳಿಯ ಈಶ್ವರ ನಗರದ ನಜೀರ್ ಅಹ್ಮದ್ ಚಮನ್ ಸಾಬ್ ಹೊನ್ನಂಬಲ್ ಹಾಗೂ ಅವರ ಮಕ್ಕಳಾದ ಅಲ್ಪಿಯಾ ಮತ್ತು ಮೊಹಿನ್ ನಜೀರ್ ಅವರ ಸಹೋದರಿ ರೇಷ್ಮಾ ಉನ್ನಿಸಾ ತೌಫೀಕ್ ಅಹ್ಮದ್ ಮತ್ತು ಅವರ ಮಕ್ಕಳಾದ ಇಫ್ರಾ ಮತ್ತು ಅಬಿದ್ ಮೃತರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button