ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 33 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತರ ಕಾರವಾರ 4, ಕುಮಟಾ 3, ಹೊನ್ನಾವರ 1, ಯಲ್ಲಾಪುರ 3, ಮುಂಡಗೋಡ 10, ಹಳಿಯಾಳ 5, ಶಿರಸಿ 1, ಸಿದ್ದಾಪುರದಲ್ಲಿ ಎರಡು ಕೇಸ್ ದಾಖಲಾಗಿದೆ. ಭಟ್ಕಳ ಮತ್ತು ಜೋಯ್ಡಾದಲ್ಲಿ ಇಂದು ಯಾವುದೇ ಕೇಸ್ ದಾಖಲಾಗಿಲ್ಲ.
ಇದೇ ವೇಳೆ ಹೊನ್ನಾವರ 11, ಕಾರವಾರ 3, ಅಂಕೋಲಾ 2, ಕುಮಟಾ 2, ಶಿರಸಿ 9, ಯಲ್ಲಾಪುರ 5, ಹಳಿಯಾಳದಲ್ಲಿ ಮೂವರು ಸೇರಿ ಒಟ್ಟು 35 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇಂದು 33 ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ13382ಕ್ಕೆ ಏರಿಕೆಯಾಗಿದೆ.
ಕುಮಟಾದಲ್ಲಿ ಮೂರು ಕೇಸ್:
ಕುಮಟಾ : ತಾಲೂಕಿನಲ್ಲಿ ಇಂದು ಒಟ್ಟು ಮೂರು ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹೊಲನಗದ್ದೆಯಲ್ಲಿ 2 ಮತ್ತು ಯಾಣದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಹೊಲನಗದ್ದೆಯ 18 ವರ್ಷದ ಯುವತಿ, 54 ವರ್ಷದ ಪುರುಷ ಹಾಗೂ ಯಾಣದ 64 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 3 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1940 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಎರಡು ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಇಂದು ಇಬ್ಬರಲ್ಲಿ ಕರೋನಾ ಪಾಸಿಟಿವ್ ಪತ್ತೆಯಾಗಿದೆ. ಕವಲಕ್ಕಿಯ 37 ವರ್ಷದ ಮಹಿಳೆ. ಗೇರುಸೋಪ್ಪಾದ 16 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಜನರು ಇಂದು ಬಿಡುಗಡೆಯಾಗಿದ್ದಾರೆ.
ಯಲ್ಲಾಪುರದಲ್ಲಿಂದು ಒಂದು ಕೇಸ್ ದೃಢ:
ಯಲ್ಲಾಪುರ: ತಾಲೂಕಿನಲ್ಲಿ ಶುಕ್ರವಾರ ಒಂದು ಕರೊನಾ ಕೇಸ್ ದೃಢಪಟ್ಟಿದೆ. ಇಂದು ಕಿರವತ್ತಿಯ 17 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಇಂದು ಐದು ಜನರು ಗುಣಮುಖರಾಗಿದ್ದಾರೆ. ನಾಳೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆ, ಹಾಸಣಗಿ, ಗೋಳಿಗದ್ದೆ, ಹೊನಗದ್ದೆ, ಗೇರಾಳ ಹಾಗೂ ಮಾವಿಬಕಟ್ಟಾಗಳಲ್ಲಿ ತಪಾಸಣೆ ನಡೆಯಲಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,
[sliders_pack id=”1487″]