Important
Trending

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಹೊನ್ನಾವರದ ವಿದ್ಯಾರ್ಥಿನಿ  ಧನಶ್ರೀ

ಹೊನ್ನಾವರ ; ಪಟ್ಟಣದ ತುಳಸಿನಗರದ ಧನಶ್ರೀ ಆರ್ ಬಾನವಾಳೇಕರ್  ಗದಗದಲ್ಲಿ  ಶೈನ್ ಸ್ಪೋರ್ಟ್ಸ್ ಅಕಾಡೆಮಿ ಲಕ್ಷ್ಮೇಶ್ವರ ಇವರು ಆಯೋಜಿಸಿದ ರಾಷ್ಟ್ರ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಇವಳು ರೇಷ್ಮಾ ಮತ್ತು ರಮಾಕಾಂತ ಬಾನವಾಳೇಕರ್ ಇವರ ಪುತ್ರಿಯಾಗಿದ್ದು, ಸೆಂಥ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4 ತರಗತಿ ಒದುತಿದ್ದಾಳೆ‌.

ಕಳೆದ ಎರಡು ತಿಂಗಳ ಹಿಂದೆ ಪ್ರಜ್ವಲ ಪ್ರದೀಪ ಶೆಟ್ಟಿ ಇವರಿಂದ ತರಬೇತಿ ಪಡೆಯುತ್ತಿದ್ದು, ಆರಂಭದಲ್ಲಿಯೇ ಈ ಸಾಧನೆ ಮಾಡಿದ್ದಾಳೆ, ಈ ವಿದ್ಯಾರ್ಥಿನಿಯ  ಸಾಧನೆಗೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜಯಕರ್ನಾಟಕ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಅಭಿನಂದಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button