Important
Trending

ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಶ್ರಾವಣ ಮಾಸದ 5 ನೇ ದಿನದ ಕಾರ್ಯಕ್ರಮ

ಶಿರಸಿ : ಶುಕ್ರವಾರದಂದು ಸಂಜೆ ಜಗನ್ಮಾತೆ ಶ್ರೀ ಮಾರಿಕಾಂಬಾ ದೇವಾಲಯದ ಸಭಾ ಮಂಟಪದಲ್ಲಿ “ ಶ್ರಾವಣ ಮಾಸ” ದ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ 6 ನೇ ದಿನದ ಮೊದಲನೇ ಕಾರ್ಯಕ್ರಮದಲ್ಲಿ ಶ್ರೀ ಶಿವಶಂಕರದಾಸರು, ಬೆಂಗಳೂರು ಇವರು ಲಕ್ಷ್ಮೀ ಕಲ್ಯಾಣ ಎಂಬ ಕೀರ್ತನೆ ಪ್ರಸ್ತುತಪಡಿಸಿದರು.

2 ನೇ ಕಾರ್ಯಕ್ರಮದಲ್ಲಿ ಆದರ್ಶ ವನಿತಾ ಸಮಾಜದ ಮಹಿಳೆಯರು ವಿವಿಧ ಭಜನೆಯನ್ನು ಪ್ರಸ್ತುತ ಪಡಿಸಿದರು. 3ನೇ ಕಾರ್ಯಕ್ರಮದಲ್ಲಿ ಶ್ರೀಮತಿ ಸ್ಮೀತಾ. ಎಮ್. ಹೆಗಡೆ, ಶಿರಸಿ ಅವರು ಭಕ್ತಿಗೀತೆ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಮಂಡಳಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶಿರಸಿ

Back to top button