Follow Us On

Google News
Job News
Trending

RPF Recruitment 2024: 4208 ಹುದ್ದೆಗಳಿಗೆ ನೇಮಕಾತಿ: SSLC ಆದವರು Apply ಮಾಡಿ

ಏಪ್ರಿಲ್ 15, 2024 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 14, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

RPF Recruitment 2024 : ಭಾರತೀಯ ರೈಲ್ವೆ ಇಲಾಖೆಯಲ್ಲಿ ಭಾರೀ ಉದ್ಯೋಗಾವಕಾಶಗಳಿವೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನಲ್ಲಿ 4208 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ( SSLC ) ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ಅಧಿಸೂನಚನೆಯ ಪ್ರಕಾರ ಆರಂಭಿಕ ವೇತನ 21,700 ರೂಪಾಯಿ ನಿಗದಿಯಾಗಿದೆ. ಏಪ್ರಿಲ್ 15, 2024 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 14, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಇದನ್ನೂ ಓದಿ: ನೇಮಕಾತಿ ಮಾಹಿತಿ: Village Accountant Recruitment 2024: 1 ಸಾವಿರ ನೇಮಕಾತಿ: 42 ಸಾವಿರದ ವರೆಗೆ ಮಾಸಿಕ ವೇತನ

RPF Recruitment 2024: ರೈಲ್ವೆ ಆರ್‌ಪಿಎಫ್ ಕಾನ್ಸ್ಟೇಬಲ್ (ಎಕ್ಸಿಕ್ಯೂಟಿವ್) ಹುದ್ದೆಗಳಿಗೆ ಹುದ್ದೆಗಳ ನೇರ ನೇಮಕಾತಿಗಾಗಿ ಇತ್ತೀಚೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು . ಈಗ ಎಲ್ಲಾ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ ಮಾಡಲಾಗಿದೆ. ಆಸಕ್ತ , ಅರ್ಹ ಅಭ್ಯರ್ಥಿಗಳು ಅಧಿಸೂಚನೆಯ ಮಾಹಿತಿಯನ್ನು ಸರಿಯಾಗಿ ಓದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಇಲಾಖೆಭಾರತೀಯ ರೈಲ್ವೆ ಇಲಾಖೆ
ಹುದ್ದೆಗಳ ಹೆಸರುಕಾನ್ಸ್ಟೇಬಲ್
ಒಟ್ಟು ಹುದ್ದೆಗಳು4208
ವಿದ್ಯಾರ್ಹತೆಎಸ್‌ಎಸ್‌ಎಲ್‌ಸಿ: SSLC

ಸಾಮಾನ್ಯ ಅರ್ಹತೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ 500 ರೂಪಾಯಿ ಮತ್ತು ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ 250 ರೂಪಾಯಿ ನಿಗದಿಯಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 01-07-2024 ಕ್ಕೆ 18-28 ವರ್ಷ ವಯಸ್ಸು ಮೀರಿರಬಾರದು ಎಂದು ತಿಳಿಸಲಾಗಿದೆ.

ಅರ್ಜಿ ಸ್ವೀಕಾರ ಆರಂಭ15-04-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ14-05-2024
ಅರ್ಜಿ ಸಲ್ಲಿಕೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಓದಲುಇಲ್ಲಿ ಕ್ಲಿಕ್ ಮಾಡಿ

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button