Focus News
Trending

ಕರೊನಾ: ದೀಪಾವಳಿ ಸಂಭ್ರಮದಲ್ಲಿರುವ ಜಿಲ್ಲೆಯ ಜನರಿಗೆ ಶುಭಸುದ್ದಿ

ಏಳು ತಾಲೂಕಿನಲ್ಲಿ ಯಾವುದೇ ಕೇಸ್ ಇಲ್ಲ
ಕಡಿಮೆಯಾಗುತ್ತಿದೆ ಕರೊನಾ ತೀವ್ರತೆ

ಕಾರವಾರ: ಜಿಲ್ಲೆಯಲ್ಲಿ ನಿಧಾನವಾಗಿ ಕರೊನಾ ತೀವ್ರತೆ ಕಡಿಮೆಯಾಗುತ್ತಿದೆ. ಇಂದಿನ ಹೆಲ್ತ್ ಬುಲೆಟಿನ್ ಮಾಹಿತಿಯಂತೆ 42 ಕರೊನಾ ಕೇಸ್ ದಾಖಲಾಗಿದೆ. ಆದರೆ, ಸುಮಾರು ಏಳು ತಾಲೂಕಿನಲ್ಲಿ ಇಂದು ಯಾವುದೇ ಕರೊನಾ ಕೇಸ್ ದಾಖಲಾಗಿಲ್ಲ.ಕಾರವಾರ, ಭಟ್ಕಳ, ಯಲ್ಲಾಪುರ,‌ಸಿದ್ದಾಪುರ, ಹಳಿಯಾಳ ಜೋಯ್ಡಾದಲ್ಲಿ ಇಂದು ಯಾವುದೇ ಕರೊನಾ ಕೇಸ್ ಕಂಡುಬಂದಿಲ್ಲ.

ಅಂಕೋಲಾದಲ್ಲಿಂದು 6 ಕೊವಿಡ್ ಕೇಸ್ :

ಅಂಕೋಲಾ : ಪಟ್ಟಣ ವ್ಯಾಪ್ತಿಯ ಕೇಣಿಯಲ್ಲಿ ರವಿವಾರ 6 ಹೊಸ ಕೋವಿಡ್ ಕೇಸ್‍ಗಳು ದಾಖಲಾಗಿದೆ. ಗುಣಮುಖರಾದ 3 ಜನರನ್ನು ಬಿಡುಗಡೆಗೊಳಿಸಿಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 3 ಮಂದಿ ಸಹಿತ ಒಟ್ಟೂ 08 ಪ್ರಕರಣಗಳು ಸಕ್ರಿಯವಾಗಿದೆ. 12 ರ್ಯಾಟ್ ಮತ್ತು 103 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 115 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್ & ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Related Articles

Back to top button