Focus News
Trending

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಯದ ವಿದ್ಯಾರ್ಥಿನಿಯರಿಗೆ ಕರಾಟೆ ತರಗತಿ ಪ್ರಾರಂಭ

ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಯದಲ್ಲಿರುವ ಮೆಟ್ರಿಕ್ ನಂತರ ಬಾಲಕಿಯರಿಗೆ ಕರಾಟೆ ತರಗತಿಯನ್ನು ಇಲಾಖೆಯ ಸೂಚನೆಯ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ. ದಿನಾಂಕ:-01-01-2022 ರಂದು ಕುಮಟಾದ ಡಿ ದೇವರಾಜ ಅರಸು ಭವನದಲ್ಲಿ ಕರಾಟೆ ತರಗತಿಯನ್ನು ಕುಮಟಾ ತಾಲೂಕು ಪಂಚಾಯತ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಈಶ್ವರ ನಾಯ್ಕ ಇವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು ರಾಮಾಯಣ, ಮಹಾಭಾರತ ಕಾಲದಿಂದಲೂ ಮಹಿಳೆಯರ ಮೇಲೆ ಶೋಷಣೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳು ನಡೆಯುತ್ತಾ ಬಂದಿದೆ.

ಇತ್ತೀಚೆಗೆ ಇದು ಇನ್ನೂ ಹೆಚ್ಚಾಗಿದೆ. ದೌರ್ಜನ್ಯ ನಡೆಯುವಾಗ ದೌರ್ಜನ್ಯ ತಡೆಯಲು ಮೊದಲು ಮಾನಸಿಕವಾಗಿ ನಾವು ದೈರ್ಯ ತಂದುಕೊಳ್ಳಬೇಕು, ದೌರ್ಜನ್ಯ ನಡೆಯುವಾಗ ಪ್ರತಿಭಟಿಸದೇ ಇರುವುದು ಕೂಡ ದೌರ್ಜನ್ಯವೇ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕರಾಟೆ ಕಲೆಯು ನಮಗೆ ಮಾನಸಿಕ ಹಾಗೂ ದೈಹಿಕವಾಗಿ ದೈರ್ಯವನ್ನು ನೀಡುತ್ತದೆ. ಸ್ವಯಂ ರಕ್ಷಣೆಗಾಗಿ ಎಲ್ಲರೂ ಕರಾಟೆಯನ್ನು ಕಲಿಯುವುದು ಅತೀ ಅವಶ್ಯಕವಿದೆ ಈ ದಿಶೆಯಲ್ಲಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ SSLC ಓದುತ್ತಿರುವ ನಿಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವಂತೆ ಸಾಧನಾ ಪುಸ್ತಕವನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಕರಾಟೆ ಪಟು ಹಾಗೂ ತರಬೇತಿದಾರರಾದ ಶ್ರೀ ಸುಬ್ರಮಣ್ಯ ಹಂದೆಯವರು ಮಾತನಾಡಿ ಭಾರತೀಯ ನೌಕಾದಳದಲ್ಲಿ 10 ವರ್ಷ ಸೇವೆ ಸಲ್ಲಿಸಿದ ನಂತರ ಕುಮಟಾ ಹಾಗೂ ಕರಾವಳಿ ಭಾಗದಲ್ಲಿ ಕಳೆದ 30 ವರ್ಷಗಳಿಂದ ಕರಾಟೆ ತರಗತಿಗಳನ್ನು ನಡೆಸುತ್ತಿದ್ದೇನೆ. ಕರಾಟೆ ಕಲೆಯು ಆತ್ಮ ಬಲವನ್ನು ನೀಡುತ್ತದೆ ಅನೀರಿಕ್ಷಿತ ದಾಳಿಯನ್ನು ಸಮರ್ಥವಾಗಿ ಎದುರಿಸಲು ಕರಾಟೆ ಕಲಿಯುವುದು ಅವಶ್ಯವಿದೆ. ವಿಶೇಷವಾಗಿ ಮಹಿಳೆಯರು ಕರಾಟೆ ಕಲಿಯುವ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಪ್ರಬಲವಾಗಬೇಕು. ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸುವ ಮಹತ್ವದ ಜವಾಬ್ದಾರಿ ನೀಡಿರುವದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀ ಗಣೇಶ ಜಿ ಪಟಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ ವಸತಿ ನಿಲಯಗಳಲ್ಲಿರುವ ಅತೀ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಅನೂಕೂಲಕರ ವಾತಾವರಣ ಹಾಗೂ ಉತ್ತಮ ಸೌಲಭ್ಯ ದೊರಕಿಸಿಕೊಡುವುದು ಇಲಾಖೆಯ ಉದ್ದೇಶವಾಗಿದೆ. ಶಿಕ್ಷಣದೊಂದಿಗೆ ಕ್ರೀಡೆ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಕೂಡಾ ಅವಕಾಶ ಒದಗಿಸಲಾಗುತ್ತದೆ. ಈಗ ಮೆಟ್ರಿಕ್ ನಂತರ ವಿದ್ಯಾರ್ಥಿನಿಯರಿಗೆ ಕೌಶಲ್ಯ ಕಲೆಯಾದ ಕರಾಟೆ ತರಬೇತಿ ನೀಡಲಾಗುತ್ತಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಶ್ರೀ ಗಜಾನನ ಆರ್ ಹೆಗಡೆ ಇವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಉದ್ದೇಶ ವಿವರಿಸಿದರು ವೇದಿಕೆಯಲ್ಲಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ ಶ್ರೀಮತಿ ಶ್ಯಾಮಲಾ ಎಮ್ ನಾಯ್ಕ, ಪ್ರ.ದ.ಸ ಶ್ರೀ ಗಣೇಶ ಮೊರ್ಬಾ, ಕರಾಟೆ ಪಟು ಶ್ರೀ ದಯಾನಂದ ನಾಯ್ಕ ಉಪಸ್ಥಿತರಿದ್ದರು ದ್ವಿ.ದ.ಸ ಶ್ರೀ ಕೃಷ್ಣ ದೇವಾಡಿಗರವರು ನಿರೂಪಿಸಿದರು, ಶ್ರೀ ವಿಶ್ವನಾಥಕುಮಾರ, ಶ್ರೀ ಚಂದ್ರಶೇಖರ, ಶ್ರೀ ರಾಘವೇಂದ್ರ, ಶ್ರೀ ಸತೀಶರವರು ಸಹಕರಿಸಿದರು ನಿಲಯ ಮೇಲ್ವಿಚಾರಕರಾದ ಶ್ರೀಮತಿ ಭವ್ಯಾ ಎಚ್ ಇವರು ವಂದನಾರ್ಪಣೆ ಮಾಡಿದರು ಸಭಾ ಕಾರ್ಯಕ್ರಮದ ನಂತರ ಕರಾಟೆ ತರಗತಿ ಪ್ರಾರಂಭವಾಯಿತು.

Back to top button