Follow Us On

Google News
Big News
Trending

ನಾಪತ್ತೆಯಾದ ವೀಕಲಚೇತನ ಬಾಲಕ; ಪೋಟೊ ಹಿಡಿದು ಊರೂರು ಸುತ್ತುತ್ತಿರುವ ಹೆತ್ತ ತಾಯಿ: ಹುಡುಕಿಕೊಡಿ ಎಂದು ಗೋಗೆರೆಯುತ್ತಿದ್ದಾಳೆ ಮಾತೆ

ಎರಡು ವಾರ ಕಳೆದರೂ ಕೂಡ ಈತ ಏಲ್ಲಿಗೆ ಹೋಗಿದ್ದಾನೆ ? ಹೇಗಿದ್ದಾನೆ? ಎಂಬುದು ಯಾರಿಗೂ ತಿಳಿದಿಲ್ಲ.‌ ಇತ್ತ ಮಗ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹೆತ್ತ ತಾಯಿ ಬೀದರನಿಂದ ಕಾರವಾರಕ್ಕೆ ಬಂದಿದ್ದು, ಕಣ್ಣೀರು ಹಾಕುತ್ತಾ ಮಗನ ಪೋಟೊ ಹಿಡಿದು ರಸ್ತೆಯುದ್ದಕ್ಕೂ ಓಡಾಡುವ ಜನರನ್ನು ವಿಚಾರಿಸತೊಡಗಿದ್ದಾಳೆ.


ಕಾರವಾರ: ಆತ ಕಿವಿಯೂ ಕೇಳದ, ಮಾತು ಬಾರದ ೧೪ ವರ್ಷದ ಬಾಲಕ. ಕಾರವಾರದ ವಸತಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಕಳೆದ ಕೆಲ ದಿನಗಳಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಮಗ ಕಾಣೆಯಾಗಿರುವ ವಿಷಯ ತಿಳಿದ ತಾಯಿ ಓಡೋಡಿ ಬಂದಿದ್ದು, ಇದೀಗ ಕಾಣೆಯಾದ ಮಗನಿಗಾಗಿ ಪೋಟೊ ಹಿಡಿದು ರಸ್ತೆಯುದ್ದಕ್ಕೂ ಕಂಡ ಕಂಡವರನ್ನು ವಿಚಾರಿಸುತ್ತಿರುವ ದೃಶ್ಯ ಸಾರ್ವಜನಿಕರ ಮನಕಲುಕುವಂತೆ ಮಾಡಿದೆ.

ಹೌದು, ಮೂಲತಃ ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಬಾರಸಂಗಿ ಗ್ರಾಮದ ವಿಕಲಚೇತನ ಬಾಲಕ ಅಲಿಷಾ ಶೇಷರಾವ್ ಸುರೈನ್ಸಿ ಎಂಬ 14 ವರ್ಷದ ಬಾಲಕನನ್ನು ನಗರದ ಆಶಾನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಸೇರಿಸಲಾಗಿತ್ತು. ಆರನೇ ತರಗತಿಯಲ್ಲಿ ಓದುತ್ತಿದ್ದ ಈತ ಕೋವಿಡ್ ಕಾರಣಕ್ಕೆ ಶಾಲೆಗಳು ಬಂದ್ ಮಾಡಿದ ಕಾರಣ ಈತ ಊರಿಗೆ ತೆರಳಿದ್ದ.

ಆದರೆ ಪುನಃ ಶಾಲೆ ಪ್ರಾರಂಭವಾಗಿದ್ದರಿಂದ ನವೆಂಬರ್ 14ರಂದು ಶಾಲೆಗೆ ತಂದು ಬಿಡಲಾಗಿತ್ತು. ಆದರೆ ಕಳೆದ ಡಿಸೆಂಬರ್ 28 ರಂದು ಸಂಜೆ 4-45ಬರ ಸುಮಾರಿಗೆ ಬಾಲಕ ವಸತಿ ನಿಲಯದ ಹಿಂಬದಿಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದಾನೆ. ಇದೀಗ ಎರಡು ವಾರ ಕಳೆದರೂ ಕೂಡ ಈತ ಏಲ್ಲಿಗೆ ಹೋಗಿದ್ದಾನೆ ? ಹೇಗಿದ್ದಾನೆ? ಎಂಬುದು ಯಾರಿಗೂ ತಿಳಿದಿಲ್ಲ.‌ ಇತ್ತ ಮಗ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹೆತ್ತ ತಾಯಿ ಬೀದರನಿಂದ ಕಾರವಾರಕ್ಕೆ ಬಂದಿದ್ದು, ಕಣ್ಣೀರು ಹಾಕುತ್ತಾ ಮಗನ ಪೋಟೊ ಹಿಡಿದು ರಸ್ತೆಯುದ್ದಕ್ಕೂ ಓಡಾಡುವ ಜನರನ್ನು ವಿಚಾರಿಸತೊಡಗಿದ್ದಾಳೆ.

ಕಾಣೆಯಾದ ಮಗನನ್ನು ಹುಡುಕಿಕೊಡಿ ಎಂದು ಗೋಗರೆಯುತ್ತಿದ್ದು ಈ ದೃಶ್ಯ ಜನಸಾಮಾನ್ಯರ ಮನ ಕಲುಕುವಂತೆ ಮಾಡಿದೆ.  ಇನ್ನು ಬಾಲಕ ನಾಪತ್ತೆಯಾಗಿರುವ  ಬಗ್ಗೆ ಕಾರವಾರ ನಗರಠಾಣೆಯಲ್ಲಿ ಸಂಬಂಧಪಟ್ಟ ಶಾಲೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದು ಹುಡುಕಾಟ ನಡೆಸಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಹೆತ್ತ ತಾಯಿ ತಮ್ಮ ಸಂಬಂಧಿಕರೊಂದಿಗೆ ಕಾರವಾರ ಮತ್ತು ಅಂಕೋಲಾದ ಬೀದಿಬೀದಿಗಳಲ್ಲಿ, ಬೀಚ್ ಗಳಲ್ಲಿ ಹುಡುಕಾಟ ನಡೆಸುತ್ತಿದ್ದಾಳೆ. ಯಾರಾದ್ರೂ ತನ್ನ ಮಗ ಕಂಡರೇ ತಿಳಿಸಿ ಎಂದು ಕೈಮುಗಿದು ಅಂಗಲಾಚಿದ್ದಾಳೆ. 

ಇನ್ನು ಬಾಲಕ ಅಲಿಷ್ ಡಿಸೆಂಬರ್ 28ರಂದು ಸಂಜೆ 4-44ರ ಸುಮಾರಿಗೆ ಹಾಸ್ಟೆಲನಲ್ಲಿ ಇತರ ಮಕ್ಕಳ ಜೊತೆಗೆ ಇದ್ದ ಎನ್ನಲಾಗಿದೆ. ಸಂಜೆ ಕಾರವಾರದ ಬಸ್ ನಿಲ್ದಾಣಕ್ಕೆ ತೆರಳಿರುವ ಬಗ್ಗೆ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.  ಆದರೆ ಬಸ್ ನಿಲ್ದಾಣದಲ್ಲಿ ಆತ ಯಾವ ಬಸ್ ಏರಿದ್ದಾನೆ ಎಂಬುದು ಯಾರಿಗೂ ತಿಳಿದಿಲ್ಲ. ಏಲ್ಲಿಗೆ ಹೋಗಿದ್ದಾನೆ ಎಂಬುದು ಗೊತ್ತಿಲ್ಲ.‌ ಮಾತನಾಡಲು ಬಾರದ ಮತ್ತು ಕಿವಿಯೂ ಕೇಳದ ಅಲಿಷನಿಗೆ ದೃಷ್ಟಿದೋಷದ ಸಮಸ್ಯೆ ಕೂಡ ಇದ್ದು ಇದೀಗ ಕುಟುಂಬ ಚಿಂತೆಗೊಳಗಾಗಿದೆ.

ನಾಪತ್ತೆಯಾಗುವ ಎರಡು ದಿನದ ಹಿಂದೆ ಹಾಸ್ಟೆಲ್ ಸಿಬ್ಬಂದಿಯೊಬ್ಬರಿಗೆ ಡಿಸೆಂಬರ್ 28ರ ಕ್ಯಾಲೆಂಡರ್ ತೋರಿಸಿ ಕಳೆದ ಭಾರಿ ತಮ್ಮೂರಲ್ಲಿ ಅದ್ದೂರಿಯಿಂದ ಕ್ರಿಸ್ಮಸ್ ಆಚರಿಸಿದ ಬಗ್ಗೆ ತಿಳಿಸಿದ್ದ ಎನ್ನಲಾಗಿದೆ. ಅಂದೇ ಆತ ಊರಿಗೆ ಹೋಗಲು ನಿರ್ಧರಿಸಿರುವ ಶಂಖೆ ವ್ಯಕ್ತವಾಗಿದೆ. ಯಾರಾದ್ರೂ ಬಾಲಕನನ್ನು ನೋಡಿದ್ದಲ್ಲಿ 8197682038, 9008325689, 9481109925 ನಂಬರಿಗೆ ತಿಳಿಸುವಂತೆ ತಾಯಿ ಜಗದೇವಿ ಹಾಗೂ ಆಶಾ ನಿಕೇತನ ಶಾಲೆಯ ಮುಖ್ಯಾಧ್ಯಾಪಕಿ ಎಲಿಷಾ ಮನವಿ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button