Focus NewsImportant
Trending

ಆಹಾರ ಅರಸುತ್ತಾ ಬಂದು ಮನೆಯ ಬಾವಿಗೆ ಬಿದ್ದ ಚಿರತೆ: ರಕ್ಷಣಾ ಕಾರ್ಯಾಚರಣೆ

ಒಂದುವರೆ ವರ್ಷದ ಚಿರತೆಯ ರಕ್ಷಣೆ

ಹೊನ್ನಾವರ: ಮನೆಯ ಆಳದ ಬಾವಿಯಲ್ಲಿ ಬಿದ್ದ ಚಿರತೆಯನ್ನು ಸಾರ್ವಜನಿಕರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿದ ಘಟನೆ ತಾಲೂಕಿನ ಸಾಲಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಕೋಣ ಸಮೀಪದ ನಡೆದಿದೆ. ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಕೋಣ ಸಮೀಪದಲ್ಲಿ ಸುಮಾರು ಒಂದುವರೆ ವರ್ಷದ ಚಿರತೆಯೊಂದು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿತ್ತು.

ವಿಪರೀತ ತಲೆನೋವು: ಚಿಕಿತ್ಸೆ ಕೊಡಿಸಿದರೂ ಕಡಿಮೆಯಾಗಿಲ್ಲವೆಂದು ನೊಂದು ಸಾವಿಗೆ ಶರಣು

ಬಾವಿಯಿಂದ ಮೇಲೆ ಬರಲು ಹರಸಾಹಸ ಪಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸಾರ್ವಜನಿಕರ ಸಹಕಾರದ ಮೇರೆಗೆ ಏಣಿ ಹಾಗೂ ಬಲೆಯ ಮುಂತಾದ ಸಲಕರಣೆಯನ್ನು ಬಳಸಿ ಸುರಕ್ಷಿತವಾಗಿ ಮೇಲಕ್ಕೆತ್ತುವ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ಆರ್.ಎಫ್.ಓ ವಿಕ್ರಂ ರೆಡ್ಡಿ ಸಲಹೆ ಮೇರೆಗೆ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button