Focus NewsImportant
Trending

ಜಿಲ್ಲಾ ಮಟ್ಟದ ವಿಚಾರ ಗೋಷ್ಠಿ ಹಾಗೂ ಚುಟುಕು ಕವಿಗೋಷ್ಠಿ

ಶಿರಸಿ:ಚುಟುಕು ಸಾಹಿತ್ಯ ಕ್ಕೆ ತನ್ನದೇ ಆದ ಇತಿಹಾಸ ವಿದೆ ಅದನ್ನು ಇನ್ನಷ್ಟು ಬೆಳೆಸುವ ಪ್ರಯತ್ನ ಆಗಬೇಕು ಎಂದುಹಿರಿಯ ಸಾಹಿತಿ ಮಂಜುನಾಥ ಹೆಗಡೆ ಹೂಡ್ಲಮನೆ ಹೇಳಿದರು.ಅವರು ನಗರದ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ ಶಿರಸಿ ಹಾಗೂ ನಯನ ಫೌಂಡೇಶನ್ ಶಿರಸಿ ಇವರ ಸಹಯೋಗದಲ್ಲಿ ನಡೆದ ದಶಮಾನೋತ್ಸವ ಸಮಾರಂಭ ಜಿಲ್ಲಾ ಮಟ್ಟದ ವಿಚಾರ ಗೋಷ್ಠಿ ಹಾಗೂ ಚುಟುಕು ಕವಿಗೊಷ್ಠಿ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಚುಟುಕು ಸಾಹಿತ್ಯ ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ ದಶಮಾನೋತ್ಸವ ಸಮಾರಂಭ ಕ್ಕೆನನ್ನನ್ನು ಸರ್ವಾಧ್ಯಕ್ಷ ನನ್ನಾಗಿ ಮಾಡಿದ್ದು ಸಂತಸ ತಂದಿದೆ.ಚುಟುಕು ಸಾಹಿತ್ಯ ಪರಿಷತ್ ಶಿರಸಿ ಘಟಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ ದ ಅಧ್ಯಕ್ಷ ಮಹೇಶ್ ಕುಮಾರ್ ಹನಕೆರೆ ಮಾತನಾಡಿ ಒಗ್ಗಟ್ಟಿನಿಂದ ಕಷ್ಟ ಪಟ್ಟು ಮಾಡಿದ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆದಿರುವುದು ಬಹಳ ಸಂತಸ ತಂದಿದೆ.
ಸಂಘಟನೆ ಮಾಡುವುದು ಸುಲಭದ ಮಾತಲ್ಲ.ಆದರೆ ನನ್ನ ಪದಾಧಿಕಾರಿಗಳು ಬಹಳ ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳ್ಳಲು ಕಾರಣೀಕರ್ತರಾಗಿದ್ದಾರೆ. ಬೆಳಿಗ್ಗೆ ಯಿಂದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಲವು ವಿಚಾರಗೋಷ್ಠಿ ಗಳು , ಚುಟುಕು ಕವಿಗೋಷ್ಠಿ ಗಳು ಬಹಳ ಸುಂದರವಾಗಿ ಅರ್ಥಪೂರ್ಣವಾಗಿ ನಡೆದಿದೆ.
ಹಣ ಪಡೆದು ಪ್ರಶಸ್ತಿ ಪಡೆಯುವ ಮನಸ್ಥಿತಿ ಯಿಂದ ಲೇಖಕರು ಹೋರಬರಬೇಕಿದೆ ಎಂದರು.

ಚುಟುಕು ಕವಿಗೊಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಜಿ .ಎ ಹೆಗಡೆ ಸೊಂದಾ
ಕವಿ ದುಷ್ಟನಾಗಲು ಸಾಧ್ಯ ವಿಲ್ಲ.ಮಕ್ಕಳಲ್ಲಿ ಸಾಹಿತ್ಯ ಭಾವವನ್ನು ಚಿಕ್ಕಂದಿನಿಂದಲೆ ಬೆಳೆಸಬೇಕು.
ಸಜ್ಜನ ಸಮಾಜಕ್ಕೆ ಸಾಹಿತ್ಯ ದ ಕೊಡುಗೆ ಅಪಾರ ವಾಗಿದೆ.

ಎಲ್ಲಾ ವಯೋಮಾನದವರೂ ಕವಿ ಗೊಷ್ಠಿಯಲ್ಲಿ ಭಾಗವಹಿಸಿ ಚುಟುಕು ಕವನ ವಾಚನ ಮಾಡಿದ್ದಾರೆ. ಕವಿಯ ಕಲ್ಪನೆ ಅದ್ಬುತ ವಾಗಿರುತ್ತದೆ. ಕವಿಗಳಿಗೆ ಅಪಾರ ವಾದ ಸ್ವಾತಂತ್ರ್ಯ ವಿದೆ.ಕವಿಗಳ ಕಲ್ಪನೆ ಯನ್ನು ತಡೆಯಲು ಪ್ರಪಂಚದ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ.ಕವಿಗಳು ಕವನ ವನ್ನು ಮಧುರವಾಗಿ ಕೇಳುಗರಿಗೆ ಮನಮುಟ್ಟುವಂತೆ ವಾಚಿಸಿದರೆ ಆ ಕವನ ಹಾಗೂ ಕವಿ ಗುರುತಿಸಲ್ಪಡುತ್ತಾನೆ. ಕಡಿಮೆ ಶಬ್ದಗಳಲ್ಲಿ ಹೆಚ್ಚು ಸಂದೇಶವನ್ನು ಸಾರುವುದೇ ಕವಿತೆಯಾಗಿದೆ.ಕವಿತೆ ಬರುಯುತ್ತಾ ಹೋದಂತೆ ನಾವು ಸಾಕಷ್ಟು ಪಾಠ ಗಳನ್ನು ಅನುಭವ ಗಳನ್ನು ಕಲಿತುಕೊಳ್ಳಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಜಗದೀಶ್ ಭಂಡಾರಿ , ಶ್ರೀಧರ ಎಸ್ ಭಟ್ ,ಹೆಚ್ ಆರ್ ಅಮರನಾಥ, ಕೆ.ಮಹೇಶ, ಮಹಾದೇವ ಚಲುವಾದಿ,ಎ.ರಾಮ ಭಟ್ , ಶಿವಪ್ರಸಾದ ಹಿರೇಕೈ ಹಾಗೂ ಚುಟುಕು ಸಾಹಿತ್ಯ ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸಲಹಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶಿರಸಿ

Back to top button