Important
Trending

ವಿಪರೀತ ತಲೆನೋವು: ಚಿಕಿತ್ಸೆ ಕೊಡಿಸಿದರೂ ಕಡಿಮೆಯಾಗಿಲ್ಲವೆಂದು ನೊಂದು ಸಾವಿಗೆ ಶರಣು

ಶಿರಸಿ: ಅನಾರೋಗ್ಯದಿಂದ ಮನನೊಂದಿದ್ದ ಗೃಹಿಣಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಹುಳಗೋಳದಲ್ಲಿ ನಡೆದಿದೆ. ಸಾವಿಗೆ ಶರಣಾದ 36 ವರ್ಷದ ಮಹಿಳೆ ಮಂಗಲಾ ಪಟಗಾರ ಕಳೆದ ಒಂದು ವರ್ಷದಿಂದ ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಚಿಕಿತ್ಸೆ ಕೊಡಿಸಿದರೂ ಕಡಿಮೆಯಾಗಿರಲಿಲ್ಲ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಕುರಿತು ಗೃಹಿಣಿಯ ತಂದೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

hitendra naik

Back to top button