ಕಾಲೇಜಿನ ವಿದ್ಯಾರ್ಥಿನಿಗೆ ಕೋವಿಡ್ ಪಾಸಿಟಿವ್ ಹಿನ್ನಲೆ: ವಿಷಯ ತಿಳಿದು ಪರೀಕ್ಷೆ ಬರೆಯುವುದನ್ನು ಬಿಟ್ಟು ಮನೆಗೆ ತೆರಳಿದ ವಿದ್ಯಾರ್ಥಿಗಳು!

ಯಲ್ಲಾಪುರ: ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಕೋವಿಡ್ ಪಾಸಿಟಿವ್ ಕಂಡುಬoದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತರಗತಿಯನ್ನು ಅರ್ಧಕ್ಕೆ ಬಿಟ್ಟು ಮನೆಗೆ ತೆರಳಿದ ಘಟನೆ ನಡೆದಿದೆ. ಕಾಲೇಜಿನ ಆಂತರಿಕ ವಿಷಯದ ಕುರಿತು ಪರೀಕ್ಷೆಯನ್ನು ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಆಗಮಿಸಿದ್ದರು. ಈ ವೇಳೆ ಸರಕಾರಿ ಆಸ್ಪತ್ರೆಯವರು ಕಾಲೇಜಿಗೆ ಬಂದು ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ಇರುವುದು ತಿಳಿಸುತ್ತಿದ್ದಂತೆ, ವಿದ್ಯಾರ್ಥಿಗಳು ಆತಂಕಗೊoಡರು. ಈ ವೇಳೆ ಸೋಂಕಿತ ವಿದ್ಯಾರ್ಥಿನಿಯ ತರಗತಿಯಲ್ಲಿನ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ ನಡೆಸಲಾಯಿತು.

ಹೊನ್ನಾವರ: ತಾಲೂಕಿನಲ್ಲಿ ಇಂದು 19 ಜನರಲ್ಲಿ ಕರೋನಾ ಪಾಸಿಟಿವ್ ಪತ್ತೆಯಾಗಿದೆ. ಪಟ್ಟಣದಲ್ಲಿ 3 ಜನರಲ್ಲಿ ಕಾಣಿಸಿಕೊಂಡರೆ, ಗ್ರಾಮೀಣ ಭಾಗದ 16 ಜನರಿಗೆ ಸೋಂಕು ದೃಢಪಟ್ಟಿದೆ. ಪಟ್ಟಣದ 46 ವರ್ಷದ ಮಹಿಳೆ., 36 ವರ್ಷದ ಮಹಿಳೆ, 27 ವರ್ಷದ ಯುವತಿಯಲ್ಲಿ ಸೋಂಕುಕಾಣಿಸಿಕೊoಡಿದೆ.

ಗ್ರಾಮೀಣ ಭಾಗವಾದ ಹಳದೀಪುರದ 53 ವರ್ಷದ ಮಹಿಳೆ, 24 ವರ್ಷದ ಯುವಕ, 25 ವರ್ಷದ ಯುವಕ, 6 ವರ್ಷದ ಬಾಲಕ, 3 ವರ್ಷದ ಬಾಲಕ, ಚಂದಾವರದ 20 ಯುವಕ,. 18 ವರ್ಷದ ಯುವಕ, 47 ವರ್ಷದ ಮಹಿಳೆ, 43 ವರ್ಷದ ಪುರುಷ, 39 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಹೊದ್ಕೆಶಿರೂರಿನ 25 ವರ್ಷದ ಯುವಕ, 32 ವರ್ಷದ ಯುವಕ, ಕೆಕ್ಕಾರನ 38 ವರ್ಷದ ಮಹಿಳೆ, ಇಡಗುಂಜಿಯ 13 ವರ್ಷದ ಬಾಲಕ, ಮಂಕಿಯ 18 ವರ್ಷದ ಯುವತಿ, ಮುಗ್ವಾದ 87 ವರ್ಷದ ಮಹಿಳೆ ಸೇರಿ ಒಟ್ಟು 19 ಜನರಲ್ಲಿ ಪಾಸಿಟಿವ್ ಕಂಡುಬoದಿದೆ.

ವಿಸ್ಮಯ ನ್ಯೂಸ್, ಹೊನ್ನಾವರ ಮತ್ತು ಯಲ್ಲಾಪುರ

Exit mobile version