Focus News
Trending

ಶಿಕ್ಷಕರು ತಂತ್ರಜ್ಞಾನದ ಜೊತೆ ಜೊತೆ ಸಾಗಬೇಕು: ಉಪನ್ಯಾಸಕ ಅರುಣ ಹೆಗಡೆ

ಕುಮಟಾ: ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಹೈಸ್ಕೂಲಿಗೆ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಆಗಮಿಸಿದ ಹಿರೇಗುತ್ತಿ ಸರಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಅರುಣ ಎನ್ ಹೆಗಡೆರವರು 10ನೇ ವರ್ಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಠ ಗುರಿ ಇರಬೇಕು. ಆ ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ. ಕಾಯಾ, ವಾಚಾ, ಮನಸ್ಸಾ ಕಲಿಕೆಯಲ್ಲಿ ಪಾಲ್ಗೊಂಡು ಪಾಲಕರಿಗೆ, ಶಿಕ್ಷಕರಿಗೆ, ಊರಿಗೆ ಕೀರ್ತಿ ತನ್ನಿ” ಎಂದರು.

ಶಿಕ್ಷಕರ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿ ತಂತ್ರಜ್ಞಾನದ ಜೊತೆಜೊತೆಗೆ ಶಿಕ್ಷಕರು ಸಾಗಬೇಕಾಗಿದೆ ಕಲಿಕೆ ನಿರಂತರ ಪ್ರಕ್ರಿಯೆ ಎಂದು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ್,ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ವಿ ನಾಯಕ, ಕವಿತಾ ದಿವಗಿ, ಬಿ.ಇಡಿ ಪ್ರಶಿಕ್ಷಣಾರ್ಥಿ ಸ್ವಾತಿ ಹರಿಕಂತ್ರ ಉಪಸ್ಥಿತರಿದ್ದರು. ಎನ್ ರಾಮು ಹಿರೇಗುತ್ತಿ ಸ್ವಾಗತಿಸಿದರು. ಮಹಾದೇವ ಗೌಡ ವಂದಿಸಿದರು.

Back to top button