Important
Trending

ಜಿಲ್ಲೆಯ ಎರಡು ತಾಲೂಕಿನ 1 ರಿಂದ 8 ನೇ ತರಗತಿ ಶಾಲೆಗಳು ಬಂದ್: ಜಿಲ್ಲಾಧಿಕಾರಿಗಳ ಆದೇಶದಲ್ಲಿ ಏನಿದೆ ನೋಡಿ?

ಕಾರವಾರ: ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನಲೆ ಯಲ್ಲಿ ಕಾರವಾರ ಮತ್ತು ಹೊನ್ನಾವರ ನಗರದ 1‌ ರಿಂದ 8 ನೇ ತರಗತಿ ಶಾಲೆಗಳಿಗೆ ಸೋಮವಾರ ದಿಂದ ಐದುದಿನ ರಜೆ ಘೋಷಣೆ ಮಾಡಲಾಗಿದೆ ಎಂದು
ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಆದೇಶದಲ್ಲಿ ಏನಿದೆ ನೋಡಿ? ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ 1 ರಿಂದ 8 ನೇ ತರಗತಿಯ ನಗರ ಪ್ರದೇಶದಲ್ಲಿನ ಸರ್ಕಾರಿ ಹಾಗೂ ಖಾಸಗಿಶಾಲೆಗಳನ್ನು ದಿ:17-01-2022 ರಿಂದ 21-01-2022 ರವರೆಗೆ ತರಗತಿಗಳನ್ನು ಸ್ಥಗಿತ ಮಾಡುವುದು. ಈ ಬಗ್ಗೆ ಸಂಬಂಧಿಸಿದ
ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ ರವರು ಜಾರಿಗೆ ತರತಕ್ಕದ್ದು

ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ ಪಿಯು ಕಾಲೇಜುಗಳಲ್ಲಿ.ದ್ವಿತೀಯ ಪಿಯು ಕಾಲೇಜಿನ ವ್ಯಾಸಂಗಕ್ಕೆ ಆದ್ಯತೆ ನೀಡಬೇಕು.

ಪ್ರಥಮ ಪಿಯು ತರಗತಿಗಳನ್ನು 50% ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೋವಿಡ್-19 ರ ಶಿಪ್ಪಾಚಾರದನ್ವಯ ಪರ್ಯಾಯ ತರಗತಿಗಳನ್ನು ಆಯೋಜಿಸಿ ತರಗತಿಗಳನ್ನು ನಡೆಸುವುವ ಬಗ್ಗೆ ಉಪನಿರ್ದೇಶಕರು ಪದವಿ ಪೂರ್ವ ಶಿಕ್ತಣ ಇಲಾಖೆ ಕಾರವಾರ ಲವರು ಕ್ರಮ ವಹಿಸುವುದು

ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ ಸರಕಾರಿ/ಖಾಸಗಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಒಟ್ಟಾರೆ 50 ವಿದ್ಯಾರ್ಥಿಗಳಿಗೆ ಮೀರದಂತ ತರಗತಿಗಳನ್ನು ನಡೆಸುವ ಬಗ್ಗೆ ಪದವಿ ಕಾಲೇಜುಗಳ ಪ್ರಾಂಶುಪಾಲರು ಕ್ರಮ ವಹಿಸುವರು.

ಶಾಲಾ-ಕಾಲೇಜುಗಳಲ್ಲಿ ಹೂವಿಡ್-19 ರ ನೋಡಲ್ ಅಧಿಕಾರಿ ನೇಮಿಸಿ ಕೊವಿಡ್-19 ರ ಶಿಷ್ಟಾಚಾರವನ್ನು ಪಾಲನೆ ಮಾಡುವ ಬಗ್ಗೆ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರವಾರ, ಪದವಿ
ಕಾಲೇಜುಗಳ ನೋಡಲ್ ಅಧಿಕಾರಿಗಳು ಕ್ರಮ ಜರುಗಿಸುವುದು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾಸ್ಕ ದರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ಶಾಲಾ ಕಾಲೇಜು ಆವರಣದಲ್ಲಿ ಓಡಾಡುತ್ತಿರುವುದು ಕಂಡುಬಂದಿರುತ್ತದೆ ಕಾರಣ ಆಯಾ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯನ್ನೇ ಹೊನೆಗಾರರನ್ನಾಗಿಸಿ ಕೋಡ್-19 ರ ಶಿವಾಚಾರವನ್ನು ಪಾಲನೆ ಮಾಡದೇ ಇರುವ ಬಗ್ಗೆ ದಂಡ ವಿಧಿಸಲಾಗುವುದು.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button