Focus News
Trending

ರಾಗ ಸಂಗೀತದ ಉಲ್ಲೇಖ ಹಾಗೂ ಪ್ರಯೋಗದ ಬಗ್ಗೆ `ರಾಗ ಸಂಗೀತ’ ಕಾರ್ಯಾಗಾರ

ಕುಮಟಾ: ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಹಾಗೂ ಗಂಗೂಬಾಯಿ ಹಾನಗಲ ಸಂಗೀತ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಗ ಸಂಗೀತ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಹುಬ್ಬಳ್ಳಿ ವಿದ್ಯಾನಗರದ ಕೆ.ಎಲ್.ಇ ಸಭಾಂಗಣದಲ್ಲಿ ಅಕ್ಟೋಬರ 2 ರಂದು ಬೆಳಿಗ್ಗೆ 10.30 ರಿಂದ ಜರುಗಲಿದೆ ಎಂದು ಕಲಾಶ್ರೀ ಅಧ್ಯಕ್ಷ ಎಚ್. ಎನ್. ಅಂಬಿಗ ತಿಳಿಸಿದ್ದಾರೆ.

ಪ್ರಾಚೀನ ಹಾಗೂ ಆಧುನಿಕ ಸಂಸ್ಕೃತ ವಾಙ್ಮಯದಲ್ಲಿ ರಾಗ ಸಂಗೀತದ ಉಲ್ಲೇಖ ಹಾಗೂ ಪ್ರಯೋಗದ ಬಗ್ಗೆ ಸಂಸ್ಕೃತ-ಸoಗೀತ ವಿದ್ವಾನ್ ಡಾ. ಕೆ. ಗಣಪತಿ ಭಟ್ಟ ಕತಗಾಲ ಅವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಸಂಗೀತದ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ಮಾಹಿತಿ ನೀಡಲಾಗುತ್ತದೆ. ಈ ನಿಃಶ್ಶುಲ್ಕ ಕಾರ್ಯಾಗಾರದಲ್ಲಿ ಸಂಗೀತ ಶಿಕ್ಷಕರು, ಕಲಾವಿದರು, ವಿಮರ್ಶಕರು ಮತ್ತು ಪ್ರೌಢ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಿರಿಯ ಸಂಗೀತ ಸಾಧಕರಾದ ಪಂ. ಕೃಷ್ಣರಾವ ಇನಾಮದಾರ, ಶ್ರೀನಿವಾಸ ಜೋಶಿ, ಡಾ. ಮಹೇಶ ಹಂಪಿಹೊಳಿ ಮುಂತಾದವರು ನಿರೀಕ್ಷರಾಗಿ ಅಭಿಪ್ರಾಯ ಪ್ರಕಟಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ದೂ: 9538934989, 8884904966 ಸಂಪರ್ಕಿಸಬಹುದು.

ವಿಸ್ಮಯ ನ್ಯೂಸ್, ಕುಮಟಾ

Back to top button