Important
Trending

ವಾಹನದಲ್ಲಿ ಅಕ್ರಮವಾಗಿ ಗೋವಾಮದ್ಯ ಸಾಗಾಟ: ಆರೋಪಿಯ ಬಂಧನ

ಜೊಯಿಡಾ: ಖಚಿತ ಮಾಹಿತಿ ಮೇರೆಗೆ ಗೊವಾದಿಂದ ಕರ್ನಾಟಕಕ್ಕೆ ಗೋವಾ ಸರಾಯಿ ತರುತ್ತಿದ್ದ  ಆರೋಪಿಯನ್ನು ವಾಹನ ಸಮೇತ ಹಿಡಿದು ಪ್ರಕರಣ ದಾಖಲಿಸಲಾಗಿದೆ.  ಜೊಯಿಡಾ ತಾಲೂಕಿನ  ಅನಮೋಡ  ಅಬಕಾರಿ ತನಿಖಾ  ಠಾಣೆಯಲ್ಲಿ ಖಚಿತ ಮಾಹಿತಿ ಮೇರೆಗೆ ವಾಹನ ನೋಂದಣಿ ಸಂಖ್ಯೆ GA 05 T 5095 ದರಲ್ಲಿ 57.000 ಲೀಟರ್ ಗೋವಾ ಮದ್ಯ  ಸಾಗಾಟ ಮಾಡುತ್ತಿದ್ದ ಶಿವಾನಂದ ನಿಂಗಪ್ಪ ಮೆಟ್ಟಿನ  ಸಾಕೀನ ಕಲ್ಲೂರ, ಜಿಲ್ಲಾ ಧಾರವಾಡ ಎಂಬುವವನನ್ನ ಬಂದಿಸಲಾಗಿದೆ. ಅಬಕಾರಿ ಸ್ವತ್ತು  ಹಾಗೂ ವಾಹನದ ಅಂದಾಜು ಮೌಲ್ಯ 13,15,750/- ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.

Railway Recruitment 2022: ಒಟ್ಟು 2422 ಹುದ್ದೆಗಳಿಗೆ ನೇಮಕಾತಿ: SSLC, ITI, PUC ಆದವರು ಅರ್ಜಿ ಸಲ್ಲಿಸಬಹುದು

ವನಜಾಕ್ಷಿ ಎಂ. ಅಬಕಾರಿ ಉಪ ಆಯುಕ್ತರು ಉ.ಕ, ಶಂಕರಗೌಡ ಪಾಟೀಲ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರ ಇವರ ಮಾರ್ಗದರ್ಶನ ಮೇರೆಗೆ ಈ ದಾಳಿಯಲ್ಲಿ  ಅಬಕಾರಿ ಉಪನಿರೀಕ್ಷಕ ರಾದ ಟಿ. ಬಿ. ಮಲ್ಲಣ್ಣವರ ಅಬಕಾರಿ   ಪೇದೆಗಳಾದ   ರಾಜು ಭಟ್ಕಳ,ನಾಗೇಂದ್ರ ಬಿ,ದೀಪಕ ಬಾರಾಮತಿ ಈ ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button