ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ ಅತಿಹೆಚ್ಚು ಅಂದರೆ 877 ಕೋವಿಡ್ ಕೇಸ್ ದಾಖಲಾಗಿದ್ದು, ಆತಂಕಕಕ್ಕೆ ಕಾರಣವಾಗಿದೆ.ಕಾರವಾರದಲ್ಲಿ 153, ಅಂಕೋಲಾ 53, ಕುಮಟಾ 92, ಹೊನ್ನಾವರ 120, ಭಟ್ಕಳ 62, ಶಿರಸಿ 135, ಸಿದ್ದಾಪುರ 22, ಯಲ್ಲಾಪುರ 18, ಮುಂಡಗೋಡ 54, ಹಳಿಯಾಳ 130 ಮತ್ತು ಜೋಯ್ಡಾದಲ್ಲಿ 38 ಸೇರಿ ಒಟ್ಟು ಜಿಲ್ಲೆಯಲ್ಲಿ 877 ಕೇಸ್ ದೃಢಪಟ್ಟಿದೆ.
ಇದೇ ವೇಳೆ, ವಿವಿಧ ಆಸ್ಪತ್ರೆಯಿಂದ ಒಟ್ಟು 797 ಮಂದಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲೇ ಅತಿಹೆಚ್ಚು ಅಂದರೆ 328 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಭಟ್ಕಳದಲ್ಲಿ ಒಂದು ಸಾವಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 795ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಕಾರವಾರ