ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಬೈಕ್ ಕದ್ದ ಅಂತರ್ ಜಿಲ್ಲಾ ಕಳ್ಳರನ್ನು ಒಂದೇ ದಿ‌ನದಲ್ಲಿ ಬಂಧಿಸಿದ ಪೊಲೀಸರು: ಕದ್ದ ಮಾಲು ಕೊಂಡವರೂ ಅಂದರ್

ಕುಮಟಾ: ಅಂತರ್‌ ಜಿಲ್ಲಾ ಕಳ್ಳರನ್ನು ಬಂಧಿಸಿ 4 ಬೈಕ್ ಗಳನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಇಟ್ಟಿದ್ದ ತನ್ನ ಮೋಟಾರ ಸೈಕಲ್ ಕಳ್ಳತನವಾಗಿದ್ದು ಹುಡುಕಿ ಕೊಡುವಂತೆ ಬೆಟ್ಕುಳಿಯ ವ್ಯಕ್ತಿ ದೂರು‌ ನೀಡಿದ್ದ.ದೂರಿನ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಕೊಂಡಿದ್ದು,ಒಂದೇ ದಿನದಲ್ಲಿ ಅಂತರ್‌ ಜಿಲ್ಲಾ ಕಳ್ಳರಾದ, ಮೊಹಮ್ಮದ ಸಲ್ಮಾನ ತಂದೆ ಮೊಹಮ್ಮದ ಗೌಸ್, ಪ್ರಾಯ 22 ವರ್ಷ, ವಾಸ: ಕಷ್ಣಾಪುರ, ಸೂರತ್ಕಲ್, ಮಂಗಳೂರು, ಹಾಗೂ ಮೊಹಮ್ಮದ ಶರಾಫತ್ ತಂದೆ ಮೊಹಮ್ಮದ ಶರೀಫ್, ಪ್ರಾಯ 20 ವರ್ಷ, ವಾಸ: ಕಷ್ಣಾಪುರ, ಸೂರತ್ಕಲ್, ಮಂಗಳೂರು ಇವರನ್ನು ದಸ್ತಗಿರಿ ಮಾಡಿ, ಆರೋಪಿರಿಂದ ಕುಮಟಾ, ಹೊನ್ನಾವರ ಹಾಗೂ ಮಂಗಳೂರಿನಲ್ಲಿ, ಕಳ್ಳತನಮಾಡಿದ್ದ ರೂ. 155000/- ಮೌಲ್ಯದ ಒಟ್ಟೂ ನಾಲ್ಕು ಮೋಟಾರ್‌ ಸೈಕಲ್‌ಗಳನ್ನು ಜಪ್ತು ಪಡಿಸಿಕೊಂಡಿದ್ದಾರೆ.

ಅಲ್ಲದೆ,ಕಳುವಾದ ಮೋಟಾರ್‌ ಸೈಕಲ್‌ಗಳನ್ನು ಸ್ವೀಕರಿಸಿದ್ದ ಆರೋಪಿತರಾದ ಆಸಿಫ್ ತಂದೆ ಅಬ್ದುಲ್ ಶೇಖ್, ಪ್ರಾಯ 22 ವರ್ಷ, ವಾಸ: ಬಸವೇಶ್ವರನಗರ, ಶಿರಸಿ ಹಾಗೂ
ಅನ್ವರ ತಂದೆ ಭಾಷಾ ಶೇಖ್, ಪ್ರಾಯ: 20 ವರ್ಷ, ವಾಸ: ಬಸವೇಶ್ವರನಗರ, ಶಿರಸಿ ಇವರುಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಕೊಂಡು ಸದರಿಯರನ್ನು ನ್ಯಾಯಾಲಯಕ್ಕೆ ಹಾಜರ್ ಪಡಿಸಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ಪ್ರಶಂಶಿಸಿ ಬಹುಮಾನ ಘೋಷಿಸಿರುತ್ತಾರೆ.

ವಿಸ್ಮಯ ನ್ಯೂಸ್ ಕುಮಟಾ

Exit mobile version